ಹಸಿರು ಉಕ್ಕು ತಯಾರಿಕೆಗೆ ನಡೆದಿದೆ ಈ ಎರಡು ಸಂಸ್ಥೆಗಳ ನಡುವೆ ಒಪ್ಪಂದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂಗಾಲದ ಹೆಜ್ಜೆಗುರುತು ಕಡಿಮೆ ಮಾಡಲು ಜಾಗತಿಕ ಪ್ರಯತ್ನಗಳು ನಡೆಯುತ್ತಿದ್ದು ಭಾರತದಲ್ಲೂ ಈ ಕುರಿತು ಅಭಿವೃದ್ಧಿಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವೇದಾಂತ ಐರನ್ ಅಂಡ್ ಸ್ಟೀಲ್ ಬ್ಯುಸಿನೆಸ್ ಹಾಗೂ ಐಐಟಿ ಬಾಂಬೆ (ಐಐಟಿ-ಬಿ) ನಡುವೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪಾಲುದಾರಿಕೆ ಒಪ್ಪಂದ ಏರ್ಪಟ್ಟಿದ್ದು ಹೈಡ್ರೋಜನ್ ಬಳಸಿ ಗ್ರೀನ್ ಸ್ಟೀಲ್ ಉತ್ಪಾದಿಸಲು ಕಡಿಮೆ ಖರ್ಚಿನ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಯೋಚಿಸಲಾಗುತ್ತಿದೆ.

ಅಲ್ಲದೇ ಸಂಶೋಧನೆ ಮತ್ತು ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಜ್ಞಾನ ಮತ್ತು ತಂತ್ರಜ್ಞಾನದ ವಿನಿಮಯದಲ್ಲಿ ಉಭಯ ಸಂಸ್ಥೆಗಳೂ ಸಹಕರಿಸಲಿವೆ. ಈ ಕುರಿತು ಮೊದಲ ಸಭೆಯನ್ನು ವರ್ಚುವಲ್ ಮೂಲಕ ಇಂದು ನಡೆಸಲಾಗಿದ್ದು ವೇದಾಂತ ಲಿಮಿಟೆಡ್‌ನ ಸೆಸಾ ಗೋವಾ ಐರನ್ ಅದಿರು ವ್ಯಾಪಾರದ ಸಿಇಒ ಸುಜಲ್ ಶಾ ಮತ್ತು ಪ್ರೊ. ಅರಿಂದಮ್ ಸರ್ಕಾರ್ ಅವರು ಉಪಸ್ಥಿತರಿದ್ದರು. ಇದು 2050 ರ ವೇಳೆಗೆ ಇಂಗಾಲವನ್ನು ಸಂಪೂರ್ಣವಾಗಿ ತಟಸ್ಥಗೊಳಿಸುವ ಮತ್ತು ಹಸಿರು ಹೈಡ್ರೋಜನ್ ಉತ್ಪಾದಿಸುವ ದೇಶದ ದೊಡ್ಡ ದೃಷ್ಟಿಗೆ ಅನುಗುಣವಾಗಿ ಮಹತ್ತರ ಹೆಜ್ಜೆಯಾಗಿದೆ. ಈ ಬೆಳವಣಿಗೆಯು ಉಕ್ಕಿನ ಉತ್ಪಾದನೆಯಲ್ಲಿ ದೇಶಕ್ಕೆ ಹೊಸ ಆಯಾಮ ನೀಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!