ಆಂಧ್ರಪ್ರದೇಶದ ಔಷಧ ತಯಾರಿಕಾ ಘಟಕದಲ್ಲಿ ಸ್ಫೋಟ, ದುರಸ್ತಿಗೆ ತೆರಳಿದ್ದ ಮೂವರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೌರಿಪಟ್ನಂನಲ್ಲಿ ಔಷಧ ತಯಾರಿಕಾ ಘಟಕದಲ್ಲಿ ಸ್ಫೋಟವಾಗಿದ್ದು,ತಾಂತ್ರಿಕ ದುರಸ್ತಿಗೆ ತೆರಳಿದ್ದ ಮೂವರು ಮೃತಪಟ್ಟಿದ್ದಾರೆ. ಘಟಕದಲ್ಲಿನ ನಿರ್ವಹಣಾ ಕೊರತೆಯೇ ಸ್ಫೋಟಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಜಿಲ್ಲಾಧಿಕಾರಿ ಕೆ. ಮಾಧವಿ ಅವರು ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಗೌರಿಪಟ್ಟಣಂನಲ್ಲಿರುವ ವಿಷನ್ ಡ್ರಗ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ತಾಂತ್ರಿಕ ಸಮಸ್ಯೆ ಸರಿಪಡಿಸಲು ಸಿಬ್ಬಂದಿ ಮುಂದಾಗಿದ್ದು, ಈ ವೇಳೆ ದುರ್ಘಟನೆ ಸಂಭವಿಸಿದೆ.

ನೀರು ಮತ್ತು ರಾಸಾಯನಿಕಗಳನ್ನು ಮರುಬಳಕೆ ಮಾಡುವ ಪೈಪ್‌ಲೈನ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ತಾಪಮಾನ ಹೆಚ್ಚಳದಿಂದ ಪೈಪ್‌ಲೈನ್ ಸ್ಫೋಟಗೊಂಡಿದೆ. ಉಪ ವ್ಯವಸ್ಥಾಪಕರು, ಶಿಫ್ಟ್ ಇನ್‌ಚಾರ್ಜ್ ಮತ್ತು ರಸಾಯನಶಾಸ್ತ್ರಜ್ಞರು ಕೆಲಸದಲ್ಲಿದ್ದರು. ಸ್ಫೋಟಕ್ಕೆ ಗಾಜಿನ ಚೂರು ಹಾಗೂ ತಗಡಿನ ತುಂಡುಗಳು ಸಿಬ್ಬಂದಿಗೆ ಚುಚ್ಚಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!