spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜೆ.ರಾಮ ಭಟ್ ರಿಗೆ ಗೌರವ ಪೂರ್ವಕ ಅಭಿನಂದನೆ

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನದ ಅಂಗವಾಗಿ ಕೆದಿಲ ಗ್ರಾಮದ ಸಂಘದ ಹಿರಿಯ ಸ್ವಯಂಸೇವಕರು, ಭಾ.ಜ.ಪ.ದ ಕಾರ್ಯಕರ್ತರು ಜೆ. ರಾಮ ಭಟ್ ಮೈರರನ್ನು ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.

ಕೆದಿಲ ಗ್ರಾಮದಲ್ಲಿ ಸಂಘ ಹಾಗೂ ಭಾರತೀಯ ಜನತಾ ಪಕ್ಷವನ್ನು ಬೆಳೆಸುವಲ್ಲಿ ಹಗಲಿರುಳೆನ್ನದೆ ಶ್ರಮವಹಿಸಿ ದುಡಿದದ್ದಲ್ಲದೆ, ಅನೇಕ ಕಾರ್ಯಕರ್ತರನ್ನು ತನ್ನ ಗರಡಿಯಲ್ಲಿ ರೂಪಿಸಿದವರು ರಾಮ ಭಟ್ಟರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರೊಂದಿಗೆ ಬಲ ಬುಜದಂತೆ ದುಡಿದಿದ್ದು,. ಅಯೋಧ್ಯೆಯ ಕರಸೇವೆಯಲ್ಲಿ ಕೆದಿಲದಿಂದ ಹೊರಟಿದ್ದ ಕರಸೇವಕರ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು. ನಂತರದ ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ಕೆದಿಲ ಗ್ರಾಮ ಸಮಿತಿ ಅಧ್ಯಕ್ಷರಾಗಿ ಅನೇಕ ವರ್ಷ  ದುಡಿದರು.

ಬ್ರಹ್ಮಚಾರಿಯಾಗಿಯೇ ಈವರೆಗೂ ಜೀವನ ನಡೆಸುತ್ತಿರುವ ರಾಮ ಭಟ್ಟರು ತನ್ನನ್ನು ಸಮಾಜಕ್ಕೆ ಅರ್ಪಿಸಿಕೊಂಡವರಂತೆ. ಸಾಮಾಜಿಕ ಕಾರ್ಯದಲ್ಲಿ ತೊಡಗಿದವರು. ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದ ಪ್ರಥಮ ಬ್ರಹ್ಮಕಲಶದಲ್ಲಿ ಚಪ್ಪರ ಸಮಿತಿಯ ರೂವಾರಿಯಾಗಿ ಅವರು ತೆಗೆದುಕೊಂಡ ಜವಾಬ್ದಾರಿ ಅವರ್ಣನೀಯ. ಹೀಗೆ ಸಂಘ, ಪಕ್ಷ, ದೇವಳ ಎಂಬಂತೆ ಹಲವು ಸಾಮಾಜಿಕ ಕ್ಷೇತ್ರದಲ್ಲಿ  ರಾಮ ಭಟ್ಟರು ತಮ್ಮನ್ನು ತಾವು ತೊಡಕಿಸಿಕೊಂಡವರು.

ಅನಾರೋಗ್ಯದಲ್ಲಿರುವ ರಾಮ ಭಟ್ಟರನ್ನು ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನದ ಅಂಗವಾಗಿ ಭಾರತೀಯ ಜನತಾ ಪಕ್ಷ ಹಾಗೂ ಹಿಂದು ಜಾಗರಣ ವೇದಿಕೆಯ ವತಿಯಿಂದ ನಿಲಯವಾದ ಮಧುರಾ ದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಹಿಂದು ಜಾಗರಣ ವೇದಿಕೆಯ ಮಾತೃ ಸುರಕ್ಷಾ ಮಂಗಳೂರು ವಿಭಾಗ ಸಂಯೋಜಕರಾದ ಶ್ರೀ ಗಣರಾಜ ಭಟ್ ಕೆದಿಲ, ಭಾರತೀಯ ಜನತಾ ಪಕ್ಷದ ಗ್ರಾಮ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್, ಕೆದಿಲ ಗ್ರಾಮ ಪಂಚಾಯತ್  ಮಾಜಿ ಅಧ್ಯಕ್ಷರಾದ ಅಣ್ಣಪ್ಪ ಕುಲಾಲ್, ಗ್ರಾಮ ಪಂಚಯತ್ ಮಾಜಿ ಸದಸ್ಯ ಕುಶಾಲಪ್ಪ ಕಜೆ, ಯುವಮೋರ್ಚಾದ ಉಪಾಧ್ಯಕ್ಷ  ಜಯಪ್ರಕಾಶ,
ಹಿರಿಯ ಕಾರ್ಯಕರ್ತರಾದ ಜಿನ್ನಪ್ಪ ಮೂಲ್ಯ, ಮೋನಪ್ಪ ಮೂಲ್ಯ, ಗುರುವಪ್ಪ ಕುಲಾಲ್,
ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss