ಮುಂಬೈನಲ್ಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್​ ಗೆ ಭೇಟಿ ನೀಡಿ, ಮಹತ್ವದ ಮಾತುಕತೆ ನಡೆಸಿದ ಬಿಲ್ ಗೇಟ್ಸ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕರಾದ ಬಿಲ್ ಗೇಟ್ಸ್ ಅವರಿಂದು ಮುಂಬೈನಲ್ಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್​ (ಆರ್​ಬಿಐ) ಕಚೇರಿಗೆ ಭೇಟಿ ನೀಡಿ, ಗವರ್ನರ್ ಶಕ್ತಿಕಾಂತ್ ದಾಸ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.

ಈ ಬಗ್ಗೆ ಆರ್​​ಬಿಐ ಟ್ವೀಟ್​ ಮಾಡಿದ್ದು, ಬಿಲ್​ ಗೇಟ್ಸ್ ಭೇಟಿ ಕೊಟ್ಟು ಗವರ್ನರ್ ಶಕ್ತಿಕಾಂತ ದಾಸ್ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು ಎಂದು ತಿಳಿಸಿದೆ. ಮತ್ತೊಂದೆಡೆ, ಶಕ್ತಿಕಾಂತ್ ದಾಸ್ ಕೂಡ ಟ್ವೀಟ್ ಮಾಡಿದ್ದು , ಬಿಲ್​ ಗೇಟ್ಸ್‌​ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದು, . ಹಣಕಾಸು, ಪಾವತಿ ವ್ಯವಸ್ಥೆಗಳು, ಕಿರು ಬಂಡವಾಳ ಹಾಗೂ ಡಿಜಿಟಲ್ ಸಾಲ ನೀಡುವಿಕೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಬಿಲಿಯನೇರ್ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಉದಾರ ದಾನ ನೀಡುವ ಬಿಲ್​ ಗೇಟ್ಸ್, ಇತ್ತೀಚೆಗೆ ಭಾರತದಲ್ಲಿ ವ್ಯಾಪಾರ ಮತ್ತು ಇತರ ಚಟುವಟಿಕೆಗಳ ನಡೆಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಆರೋಗ್ಯ, ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ. ಭೂಮಿಯಲ್ಲಿರುವ ಇತರ ದೇಶಗಳಂತೆ ಭಾರತವು ಸೀಮಿತ ಸಂಪನ್ಮೂಲಗಳನ್ನು ಹೊಂದಿದೆ. ಆದರೆ, ಆ ನಿರ್ಬಂಧದ ಹೊರತಾಗಿಯೂ ಜಗತ್ತು ಇನ್ನೂ ಹೇಗೆ ಪ್ರಗತಿ ಸಾಧಿಸಬಹುದು ಎಂಬುದನ್ನು ಭಾರತ ನಮಗೆ ತೋರಿಸಿದೆ ಎಂದು ಗೇಟ್ಸ್ ಸೋಮವಾರ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!