Monday, August 8, 2022

Latest Posts

ಜಮ್ಮು ಕಾಶ್ಮೀರದ ಉರಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಭದ್ರತಾ ಪಡೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಜಮ್ಮು ಕಾಶ್ಮೀರದ ಉರಿಯಲ್ಲಿ ಭಾರತೀಯ ಭದ್ರತಾ ಪಡೆಗಳು ಎನ್ ಕೌಂಟರ್ ಮೂಲಕ ಮೂವರು ಪಾಕಿಸ್ಥಾನ ಉಗ್ರರನ್ನು ಹೊಡೆದುರುಳಿಸಿದೆ.
ಲೈನ್ ಆಫ್ ಕಂಟ್ರೋಲ್ ನ ರಾಂಪುರ್ ಸೆಕ್ಟರ್ ನಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದಿದೆ. ಈ ವೇಳೆ ಎನ್ ಕೌಂಟರ್ ಆರಂಭವಾಗಿದೆ.
ಸ್ಥಳದಲ್ಲಿ ಒಟ್ಟು ಆರು ಭಯೋತ್ಪಾದಕರು ಅಡಗಿರುವ ಮಾಹಿತಿಯಿದ್ದು, ಇದುವರೆಗೆ ಒಟ್ಟು ಮೂವರನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಸದ್ಯ ಎನ್ ಕೌಂಟರ್ ಮುಂದುವರಿದಿದೆ.
ಭಾರತೀಯ ಸೇನೆಯು ಕಾರ್ಯಾಚರಣೆಯಲ್ಲಿ ಹತ್ಯೆಯಾದ ಭಯೋತ್ಪಾದಕರಿಂದ ಐದು ಎಕೆ -47, 8 ಪಿಸ್ತೂಲ್ ಮತ್ತು 70 ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss