Tuesday, August 16, 2022

Latest Posts

ಇನ್ಯಾರಿಗೋ ಹೆಣೆದ ಮೋಸದ ಬಲೆಯಲ್ಲಿ ನೀವೇ ಬೀಳಬಹುದು ಹುಷಾರ್!

ಬೇಕರಿ ಮಾಲೀಕನೊಬ್ಬ ಹೈನುಗಾರನಿಂದ ವಾರದಲ್ಲಿ ಒಮ್ಮೆ 1 ಕೆಜಿ ಬೆಣ್ಣೆ ತೆಗೆದುಕೊಳ್ಳುತ್ತಿರುತ್ತಾನೆ. ಆತನಿಗೆ ಒಂದು ದಿನ ‘ಬೆಣ್ಣೆ ಒಂದು ಕೆಜಿ ಇಲ್ಲ’ ಎಂಬ ಸಂದೇಹ ಮೂಡುತ್ತದೆ. ಆಗ ಬೆಣ್ಣೆಯನ್ನು ತೂಕ ಮಾಡುತ್ತಾನೆ. ಬೆಣ್ಣೆ 1 ಕೆಜಿಗಿಂತ ಕಡಿಮೆ ಇರುತ್ತದೆ. ಆಗ ಬೇಕರಿ ಮಾಲೀಕನಿಗೆ ಸಿಟ್ಟು ಬಂದು ಹೈನುಗಾರನ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತಾನೆ.

ನ್ಯಾಯಾಲದಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತದೆ. ಹೈನುಗಾರನಲ್ಲಿ “ನೀನು ಹೇಗೆ ಬೆಣ್ಣೆ ತೂಕ ಮಾಡುತ್ತೀಯಾ, ನಿನ್ನ ಬಳಿ ಬೆಣ್ಣೆ ತೂಕ ಮಾಡು ಯಂತ್ರ ಇದೆಯೇ” ಎಂದು ನ್ಯಾಯಾಧೀಶರು ಕೇಳುತ್ತಾರೆ.

ಆಗ ಹೈನುಗಾರ ಹೇಳುತ್ತಾನೆ “ಸ್ವಾಮಿ ನನ್ನ ಬಳಿ ಬೆಣ್ಣೆ ತೂಕ ಮಾಡುವ ಯಾವ ಯಂತ್ರ ಇಲ್ಲ. ನಾನು ಹಳೆ ಕಾಲದ ತಕ್ಕಡಿಯಲ್ಲಿ ತೂಕ ಮಾಡುತ್ತೇನೆ. ಈ ಬೇಕರಿ ಮಾಲೀಕನಿಗೆ ಬೆಣ್ಣೆ ಕೊಡುವ ಹಿಂದಿನ ದಿನ ಅವರದೇ ಬೇಕರಿಯಿಂದ ಒಂದು ಕೆಜಿ ಬ್ರೆಡ್ ತೆಗೆದುಕೊಳ್ಳುತ್ತೇನೆ. ನಂತರ ಮನೆಗೆ ಹೋಗಿ ತಕ್ಕಡಿಯ ಒಂದು ಕಡೆ ಬ್ರೆಡ್ ಇಡುತ್ತೇನೆ, ಇನ್ನೊಂದು ಕಡೆ ಬೆಣ್ಣೆ ಇಡುತ್ತೇನೆ. ಬ್ರೆಡ್ ಎಷ್ಟು ತೂಗುತ್ತೋ ಅಷ್ಟು ಬೆಣ್ಣೆ ಹಾಕುತ್ತೇನೆ” ಎನ್ನುತ್ತಾನೆ.

ಇಡೀ ನ್ಯಾಯಾಲಯ ಸ್ತಬ್ಧವಾಗುತ್ತದೆ. ಎಲ್ಲರೂ ಬೇಕರಿ ಮಾಲೀಕನನ್ನು ನೋಡುತ್ತಾರೆ. ಆತ ಏನೂ ಮಾತನಾಡದೇ ಸುಮ್ಮನೇ ನಿಂತಿರುತ್ತಾನೆ.

ಯಾವಾಗಲೂ ಅಷ್ಟೆ.. ನೀವು ಸಮಾಜಕ್ಕೇ ಆಗಲಿ, ಯಾವುದೋ ವ್ಯಕ್ತಿಗೆ ಆಗಲಿ ಏನನ್ನಾ ಕೊಡುತ್ತೀರೋ, ಇವತ್ತಲ್ಲ, ನಾಳೆ ಅದೇ ನಿಮಗೆ ವಾಪಸ್ಸು ಸಿಗುತ್ತದೆ. ಒಳ್ಳೆದನ್ನು ಕೊಟ್ಟರೆ ಒಳ್ಳೆದು, ಕೆಟ್ಟದನ್ನು ಕೊಟ್ಟರೆ ಕೆಟ್ಟದ್ದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss