ತಾಜ್ ಮಹಲ್ ಎದುರು ಹಿಂದು ಸಂಪ್ರದಾಯದಂತೆ ಮರುಮದುವೆಯಾದ ಇಟಲಿ ದಂಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಗ್ರಾ ತಾಜ್ ಮಹಲ್ ನೋಡಲು ಇಡೀ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇದನ್ನು ಪ್ರೀತಿಯ ಸಂಕೇತ ಎಂದು ಕರೆಯುತ್ತಾರೆ. ಇದೀಗ ಇದರ ಎದುರುಗಡೆ ಇಟಲಿಯ ದಂಪತಿ ಹಿಂದು ಸಂಪ್ರದಾಯದಂತೆ ಮರುಮದುವೆಯಾಗಿದ್ದಾರೆ.

ಹೌದು, ತಾಜ್ ಮಹಲ್‌ ವೀಕ್ಷಿಸಲು ಇಟಲಿಯಿಂದ ಆಗಮಿಸಿದ್ದ ಮೌರೊ ಮತ್ತು ಸ್ಟೆಫಾನಿಯಾ ತಮ್ಮ 40ನೇ ವಿವಾಹ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಲು ಬಯಸಿದ್ದರು. ಹೀಗಾಗಿ ಅವರು ಹಿಂದು ಸಂಪ್ರದಾಯದೊಂದಿಗೆ ಮರುಮದುವೆ ಮಾಡಿಕೊಳ್ಳಲು ಬಯಸಿದ್ದರು. ಈ ಸಂಬಂಧ ಎಂಟಿಎ ಗ್ರೂಪ್‌ನ ಮನೀಶ್ ಶರ್ಮಾ ಎಂಬವರನ್ನು ಈ ದಂಪತಿ ಸಂಪರ್ಕಿಸಿದ್ದಾರೆ. ಮನೀಶ್​ ಅವರು ತಾಜ್ ಬಳಿಯ ರೆಸಾರ್ಟ್‌ವೊಂದರಲ್ಲಿ ಮದುವೆಗೆ ಸಿದ್ಧತೆ ನಡೆಸಿದ್ದಾರೆ.ಈ ಮೂಲಕ ಅದ್ದೂರಿಯಾಗಿ ಮದುವೆ ನಡೆಯಿತು.

ಏಳೇಳು ಜನ್ಮಗಳಲ್ಲೂ ನಾವು ಒಂದಾಗಿರಲು ಬಯಸುತ್ತೇವೆ. ಹಿಂದು ಸಂಸ್ಕೃತಿಯನ್ನು ತುಂಬಾ ಇಷ್ಟಪಡುತ್ತೇವೆ. ಅದಕ್ಕಾಗಿಯೇ ಮರುಮದುವೆ ಮಾಡಿಕೊಂಡಿದ್ದೇವೆ ಎಂದು ಮೌರೋ ದಂಪತಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!