ಎಂಟು ವರ್ಷಗಳ ಮೋದಿ ಆಡಳಿತದ ಕುರಿತಾಗೊಂದು ಹಿನ್ನೋಟ : ಇಲ್ಲಿವೆ ನೋಡಿ ಪ್ರಧಾನಿಯವರ ಟ್ವೀಟ್‌ಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಮ್ಮ 8 ವರ್ಷಗಳ ಸುಭದ್ರ ಆಡಳಿತದಲ್ಲಿ ಜಾರಿಗೊಳಿಸಲಾದ ಉಪಕ್ರಮಗಳು ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳು, ಸುಧಾರಣೆಗಳ ಕುರಿತಾಗಿ narendramodi.in ಮತ್ತು MyGovನ  ಲೇಖನ ಸರಣಿಗಳನ್ನು ಪ್ರದಾನಿ ನರೇಂದ್ರ ಮೋದಿ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಆತ್ಮನಿರ್ಭರ ಭಾರತ, ಜನಕೇಂದ್ರಿತ ಮಾನವೀಯ ಆಡಳಿತ ವಿಧಾನ, ರಕ್ಷಣಾವಲಯದ ಸುಧಾರಣೆಗಳು, ವಿದೇಶಾಂಗ ನೀತಿನಿರೂಪಣೆ ಮುಂತಾದ ವಿಷಯಗಳ ಕುರಿತು ಪ್ರಧಾನಿ ಹಂಚಿಕೊಂಡಿರುವ ಟ್ವೀಟ್‌ ಥ್ರೆಡ್‌ಗಳು ಅವರ ಸರ್ಕಾರ ಏನೆಲ್ಲಾ ಸಾಧಿಸಿದೆ ಎಂಬುದರ ಕುರಿತು ಬೆಳಕು ಚೆಲ್ಲುವಂತಿದೆ.

“130 ಕೋಟಿ ಭಾರತೀಯರು ದೇಶವನ್ನು ಆತ್ಮನಿರ್ಭರವನ್ನಾಗಿಸಲು ನಿರ್ಧರಿಸಿದ್ದಾರೆ. ಜಾಗತಿಕ ಸಮೃದ್ಧಿಗಾಗಿ ಸ್ವಾಲಂಬನೆಯನ್ನು ನಮ್ಮ ಸರ್ಕಾರ ಉತ್ತೇಜಿಸುತ್ತದೆ” ಎಂದು ಆತ್ಮನಿರ್ಭರ ಭಾರತದ ಕುರಿತು ಮೋದಿ ಟ್ವೀಟ್‌ ಮಾಡಿದ್ದಾರೆ.

 

“ನಮೋ ಅಪ್ಲಿಕೇಷನ್ನಲ್ಲಿರುವ ಈ ಲೇಖನವು ಸ್ವದೇಶೀಕರಣ, ರಕ್ಷಣಾ ಕಾರಿಡಾರ್‌ಗಳ ತಯಾರಿಕೆ, ರಕ್ಷಣಾ ರಫ್ತುಗಳನ್ನು ಉತ್ತೇಜಿಸುವುದು ಮತ್ತು ಮುಂತಾದವುಗಳನ್ನು ಒಳಗೊಂಡಂತೆ ರಕ್ಷಣಾ ವಲಯದಲ್ಲಿನ ಸುಧಾರಣೆಗಳ ಸರಣಿಯನ್ನು ಎತ್ತಿ ತೋರಿಸುತ್ತದೆ” ಎಂದು ರಕ್ಷಣಾ ಕ್ಷೇತ್ರದ ಕುರಿತು ಟ್ವೀಟ್‌ ಮಾಡಿದ್ದಾರೆ.

“ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ ಮತ್ತು ಸಬ್ಕಾ ಪ್ರಯಾಸ್’ ಎಂಬ ಮಂತ್ರದಿಂದ ಪ್ರೇರಿತರಾಗಿ, ನಮ್ಮ ಸರ್ಕಾರವು ಬಡವರು, ಯುವಕರು, ರೈತರು, ಮಹಿಳೆಯರಿಗೆ ಸಹಾಯ ಮಾಡುವ ಜನಪರ ಆಡಳಿತವನ್ನು ಹೆಚ್ಚಿಸಲು ಹಲವಾರು ಪ್ರಯತ್ನಗಳನ್ನು ಮಾಡಿದೆ” ಎಂದು ಮೋದಿ ಜನಪರ ಆಡಳಿತದ ಬಗ್ಗೆ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!