Monday, August 8, 2022

Latest Posts

ಕಲಬುರಗಿಯಲ್ಲಿ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಅವಲೋಕನ ಬೈಠಕ್

ಹೊಸ ದಿಗಂತ ವರದಿ, ಕಲಬುರಗಿ:

ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕಲಬುರಗಿ ಜಿಲ್ಲೆಯ ಅವಲೋಕನ ಬೈಠಕ್ ಇಂದು ನಗರದ ಖಮಿತ್ಕರ್ ಭವನದಲ್ಲಿ ನಡೆಯಿತು.
ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ 300 ಜನ ಅಭಿಯಾನದ ಕಾರ್ಯಕರ್ತರು ಬೈಠಕ್ಕಿನಲ್ಲಿ ಭಾಗವಹಿಸಿದ್ದರು. ಅಭಿಯಾನದ ಪ್ರಾಂತ ಪ್ರಮುಖರಾದ ಶ್ರೀ ಕೃಷ್ಣ ಜೋಷಿಯವರು ಪ್ರಾಸ್ತಾವಿಕ ಮಾತನಾಡಿದರು.
ಜಿಲ್ಲಾ ಸಂಘಚಾಲಕರಾದ ಚಿಂಚೋಳಿಯ ಅಶೋಕ ಪಾಟೀಲರು ಮತ್ತು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀ ಲಿಂಗರಾಜಪ್ಪ ಅಪ್ಪ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಅಭಿಯಾನದ ಜಿಲ್ಲಾ ಪ್ರಮುಖರಾದ ನಾಗಪ್ಪ ಮೈಲ್ವಾರ ಅವರು ಅಭಿಯಾನದ ವರದಿ ವಾಚಿಸಿದರು. ಅಂಬರೀಶ ಸುಲೆಗಾಂವ್ ವಂದಿಸಿದರು. ಅಭಿಮಾನದ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ಕಾರ್ಯಕರ್ತರು ಹಂಚಿಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss