ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮಕ್ಕಳನ್ನು ದೇವರಿಗೆ ಹೋಲಿಸುವುದು ಸುಮ್ಮನೆ ಅಲ್ಲ. ಅವರ ಮನಸ್ಸು ಸ್ವಚ್ಛ ಸುಂದರ. ಜಾತಿ-ನೀತಿ, ಪ್ರಾಣಿ-ಪಕ್ಷಿ ಎಂಬ ಬೇಧ-ಭಾವವಿಲ್ಲದೇ ಎಲ್ಲರನ್ನೂ ಸಮನಾಗಿ ನೀಡುವುದು ಬಹುಶಃ ಮಕ್ಕಳು ಮಾತ್ರ. ಕೆಲವೊಮ್ಮೆ ಮಕ್ಕಳ ತಮ್ಮ ಮುಗ್ಧ ವರ್ತನೆಯಿಂದ ದೊಡ್ಡವರಿಗೆ ದೊಡ್ಡ ಪಾಠವನ್ನೇ ಕಲಿಸುವುದುಂಟು.
ಪುಟಾಣಿ ಮಕ್ಕಳ ಸಾಕಷ್ಟು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ನೋಡಸಿಗುತ್ತದೆ. “ತಾನು ಮಳೆಯಲ್ಲಿ ನೆನೆದರೂ ಪರವಾಗಿಲ್ಲ, ನಾಯಿ ನೆನಯಬಾರದೆಂದು ಪುಟಾಣಿ ಮಗು ಕೊಡೆ ಹಿಡಿಯುತ್ತಿರುವ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ದೃಶ್ಯಕ್ಕೆ ಫಿದಾ ಆಗಿದ್ದಾರೆ.
ವಿಡಿಯೋದಲ್ಲಿ ಏನಿದೆ…
@HopkinsBRFC ಎಂಬ ಟ್ವಿಟ್ಟರ್ ಖಾತೆಯಲ್ಲಿ 11 ಸೆಕೆಂಡಿನ ಈ ವಿಡಿಯೋ ಅಪ್ಲೋಡ್ ಆಗಿದೆ. ಜೋರಾಗಿ ಮಳೆ ಸುರಿಯುತ್ತಿದೆ. ಶ್ವಾನವೊಂದು ಮಳೆಯಲ್ಲಿ ತೋಯುತ್ತಿರುತ್ತದೆ. ಇದನ್ನು ನೋಡಿದ ಪುಟಾಣಿ ಹೆಣ್ಣು ಮಗು ತಾನು ನೆನೆದರೂ ಪರಾವಾಗಿಲ್ಲವೆಂದು ಶ್ವಾನಕ್ಕೆ ಕೊಡೆ ಹಿಡಿಯಲು ಮುಂದಾಗುತ್ತದೆ. ಶ್ವಾನ ಹಿಂದೆ ಮುಂದೆ ಓಡಾಡಿದರೂ ಬಿಡದೇ ಅದರ ಹಿಂದೆಯೇ ಹೋಗಿ ಕೊಡೆ ಹಿಡಿಯುವ ಅದ್ಭುತ ದೃಶ್ಯವಿದು.
This little girl will go far in life pic.twitter.com/QAPEKwq3Em
— ❤️A page to make you smile again ❤️ (@HopkinsBRFC) April 30, 2021
ಈ ದೃಶ್ಯ ಎಲ್ಲಿನದ್ದು, ಯಾವಾಗ ಸೆರೆಯಾಗಿದ್ದು ಎಂದು ಗೊತ್ತಾಗಿಲ್ಲ. ಆದರೆ ಈ ವಿಡಿಯೋವನ್ನು ಬಹಳಷ್ಟು ಜನ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಪುಟಾಣಿಯ ಪ್ರಾಣಿ ಪ್ರೀತಿಗೆ ಸೆಲ್ಯೂಟ್ ಮಾಡಿದ್ದಾರೆ.