Monday, August 8, 2022

Latest Posts

ಗಜರಾಜನ ಟಿಪ್ ಟಾಪ್ ಸ್ಟೈಲ್ ಗೆ ಆನಂದ್ ಮಹೀಂದ್ರಾ ಫಿದಾ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪ್ರಾಣಿಗಳನ್ನು ಸಾಕುವುದು ಅಂದರೆ ಕೆಲವರಿಗೆ ಫ್ಯಾಷನ್ ,ಇನ್ನೂ ಕೆಲವರಿಗೆ ಹವ್ಯಾಸ. ಈ ವೇಳೆ ಅವರು ತಮ್ಮ ನೆಚ್ಚಿನ ಸಾಕು ಪ್ರಾಣಿಗಳಿಗೆ ವಿವಿಧ ರೀತಿಯಲ್ಲಿ ಪ್ರೀತಿಯನ್ನು ತೋರಿಸುತ್ತಾರೆ. ಅವುಗಳನ್ನು ವಿವಿಧ ರೀತಿಯಲ್ಲಿ ರೆಡಿ ಮಾಡಿ ಖುಷಿ ಪಡುತ್ತಾರೆ.
ಆದರೆ ಸಣ್ಣ ಪ್ರಾಣಿಗಳಿಗೆ ಶೃಂಗಾರ ಮಾಡುವುದಕ್ಕೂ ದೊಡ್ಡ ಪ್ರಾಣಿಗೆ ಮಾಡುವುದಕ್ಕೆ ತುಂಬಾ ವಿಭಿನ್ನತೆ ಇದೆ. ಅದರಲ್ಲೂ ಆನೆಗಳಿಗೆ ಸ್ಟೈಲ್ ಮಾಡಲು ಹೋಗಿ ಪ್ಯಾಂಟ್ ಶರ್ಟ್​ ಬೆಲ್ಟ್ ಹಾಕಿದರೇ ಹೇಗಿರುತ್ತದೆ. ಇದೀಗ ಇಂತಹದೇ ಒಂದು ಫೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಹೌದು, ಮಹೀಂದ್ರಾ ಗ್ರೂಪ್​ ಮುಖ್ಯಸ್ಥ ಆನಂದ್ ಮಹೀಂದ್ರಾ ಟ್ವಿಟ್ಟರ್​ನಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಅವರು ಹೊಸತನವನ್ನು ಕಂಡಾಗ ಅವುಗಳನ್ನು ಪೋಸ್ಟ್ ಮಾಡಿ ಜನರನ್ನು ಸೆಳೆಯುತ್ತಾರೆ.
ಇದೀಗ ಆನಂದ್ ಮಹೀಂದ್ರಾ ಟ್ವಿಟ್ಟರ್​​ನಲ್ಲಿ ಫೋಟೋ ಒಂದನ್ನುಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ. ‘ಮಾರುಕಟ್ಟೆಯ ಬೀದಿಯಲ್ಲಿ ಮಾವುತನೊಂದಿಗೆ ಆನೆಯೊಂದು ಪ್ಯಾಂಟ್, ಬೆಲ್ಟ್ ಹಾಗೂ ಶರ್ಟ್​ ಹಾಕಿಕೊಂಡು ಹೊರಟಿದ್ದ ಫೋಟೋವನ್ನು ಹಂಚಿಕೊಂಡಿದ್ದು ನೆಟ್ಟಿಗರ ಮನಗೆದ್ದಿದೆ .
ಇದಕ್ಕೆ ತೀವ್ರ ಆಶ್ಚರ್ಯ ವ್ಯಕ್ತಪಡಿಸಿರುವ ಆನಂದ ಮಹಿಂದ್ರಾ ಇನ್​ಕ್ರೆಡಿಬಲ್ ಇಂಡಿಯಾ Ele-Pant ಎಂದು ಟ್ವೀಟ್ ಮಾಡಿದ್ದಾರೆ.
ಚಿತ್ರದಲ್ಲಿ ಆನೆ ಕೆನ್ನೇರಳೆ ಶರ್ಟ್ ಮತ್ತು ಕಪ್ಪು ಬಣ್ಣದ ಬೆಲ್ಟ್​ನೊಂದಿಗೆ ಬಿಳಿ ಪ್ಯಾಂಟ್ ಧರಿಸಿದೆ.
ಮಹೀಂದ್ರಾ ಅವರ ಈ ಪೋಸ್ಟ್​​ಗೆ 12 ಸಾವಿರಕ್ಕೂ ಅಧಿಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಿರಕ್ಕೂ ಅಧಿಕ ಜನ ಮರುಪೋಸ್ಟ್​ ಮಾಡಿದ್ದು, ನೂರಾರು ಜನ ಕಮೆಂಟ್ಸ್​ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss