Wednesday, June 29, 2022

Latest Posts

ಪ್ಯಾರಾಲಿಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ: ಆನಂದ್ ಮಹೀಂದ್ರ ಘೋಷಣೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅವನಿ ಲೇಖಾರಾ ಅವರಿಗೆ ಆನಂದ್ ಮಹಿಂದ್ರ  ಕಡೆಯಿಂದ ಭರ್ಜರಿ ಗಿಫ್ಟ್ ಸಿಗುತ್ತಿದೆ.
ಹೌದು, ವಿಕಲಚೇತನರಿಗಾಗಿ ಅಭಿವೃದ್ಧಿಪಡಿಸಿರುವ ಮೊದಲ ಎಸ್‌ಯುವಿ ಕಾರ್‌ನ್ನು ಅವನಿಗೆ ಗಿಫ್ಟ್ ನೀಡಲು ಆನಂದ್ ಮಹಿಂದ್ರಾ ನಿರ್ಧರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದು, ಒಂದು ವಾರದ ಹಿಂದೆ ಅಥ್ಲೀಟ್ ದೀಪಿಕಾ ವಿಶೇಷ ಚೇತನರಿಗಾಗಿ ನೂತನ ಎಸ್‌ಯುವಿ ಅಭಿವೃದ್ಧಿಪಡಿಸಿ ಎಂದು ಮನವಿ ಮಾಡಿದ್ದರು. ಟೋಕಿಯೋದಲ್ಲಿ ಇರುವ ರೀತಿ ವಾಹನಗಳು ನಮ್ಮಲ್ಲೂ ಬರಲಿ ಎಂದು ಕೇಳಿದ್ದರು. ಅವರು ಹೇಳಿದ ಹಾಗೆ ನಾನು ನನ್ನ ಸಹೋದ್ಯೋಗಿ ವೇಲು ಅವರ ಜೊತೆ ಮಾತನಾಡಿದೆ. ಅವರು ಅಭಿವೃದ್ಧಿಪಡಿಸುವ ಮೊದಲ ಕಾರನ್ನು ನಾನು ಅವನಿ ಲೇಖಾರಾ ಅವರಿಗೆ ಗಿಫ್ಟ್ ಮಾಡಲು ಇಷ್ಟಪಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss