ಟ್ರಕ್‌ ಹಿಂದೆ ಬರೆದ ಸಾಲುಗಳನ್ನು ಕಂಡು ಆನಂದ್‌ ಮಹೀಂದ್ರಾ ಹೇಳಿದ್ದೇನು..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಿನನಿತ್ಯ ಪ್ರಯಾಣದಲ್ಲಿ ಆಟೋ, ಬಸ್‌, ಕಾರು, ಲಾರಿ ಟ್ರಕ್‌ ಹೀಗೆ ಯಾವುದಾದರೂ ವಾಃನಗಳ ಮೇಲೆ ಸ್ಲೋಗನ್‌ಗಳನು ನೋಡುತ್ತಿರುತ್ತೇವೆ. ಕೆಲವು ನಗು ತರಿಸುವಂತೆ ಇದ್ದರೆ, ಇನ್ನೂ ಕೆಲವು ಸತ್ಯದರ್ಶನ ಮಾಡಿಸುತ್ತವೆ. ಮತ್ತೆ ಕೆಲವು ಯೋಚನೆ ಮಾಡುವಂತೆ ಮಾಡುತ್ತವೆ.

ಅದರಲ್ಲಿ ಈ ಟ್ರಕ್‌ನ ಹಿಂದೆ ಬರೆದ ಸಾಲುಗಳು ಹಾಗೆಯೇ..ಇವೆ. ಈ ಬಗ್ಗೆ ದಿ. ಗ್ರೇಟ್‌ ಬ್ಯುಸಿನೆಸ್‌ ಮ್ಯಾನ್‌ ಆನಂದ್‌ ಮಹೀಂದ್ರಾ ಫೋಟೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬ್ರಿಲಿಯಂಟ್‌ ಎಂಬ ಶೀರ್ಷಿಕೆ ನೀಡಿ ಹಂಚಿಕೊಂಡಿದ್ದಾರೆ.

ಆ ಟ್ರಕ್‌ ಹಿಂದೆ ಬರೆದಿದ್ದ ಸಾಲುಗಳು ಇವು…ʻನಿಮ್ಮ ಏರ್‌ ಬ್ಯಾಗ್‌ ಅನ್ನು ಪರಿಶೀಲಿಸಿʼ ಎಂಬ ಕೊಟೇಷನ್‌ ನೋಡಿ ಆನಂದ್‌ ಮಹೀಂದ್ರಾ ಬ್ರಿಲಿಯಂಟ್‌ ಎಂದು ಶೀರ್ಷಿಕೆ ನೀಡಿದ್ದಾರೆ. ಆನಂದ್‌ ಮಹೀಂದ್ರಾ ಟ್ವೀಟ್‌ಗೆ ಕಮೆಂಟ್‌ ಮಾಡಿದ ಹಲವರು. ಸರ್‌ ನಿಮ್ಮ ಪೋಸ್ಟ್‌ಗಳು ತುಂಬಾ ಚೆನ್ನಾಗಿರುತ್ತವೆ. ಕೆಲವು ನಗು ತರಿಸುತ್ತವೆ ಎಂದಿದ್ದಾರೆ.  ʻನಿಮ್ಮ ಏರ್‌ಬ್ಯಾಗ್ ಅನ್ನು ಇಲ್ಲಿ ಪರೀಕ್ಷಿಸಬೇಡಿʼ ಎಂದು ಬರೆಯಬೇಕಿತ್ತು ಎಂದು ಮತೊಬ್ಬರು ಕಮೆಂಟ್‌ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!