ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿ ಆನಂದ್ ಮಹೀಂದ್ರಾ, ದೆಹಲಿಯ ವಾಯು ಮಾಲಿನ್ಯವನ್ನು ತಡೆಯಲು ಉತ್ತಮ ಪರಿಹಾರವನ್ನು ಕಂಡುಕೊಂಡಿದ್ದಾರೆ. ತಮ್ಮಲ್ಲಿರುವ ಆಲೋಚನೆಯನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.
ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿರುವ ಮಹೀಂದ್ರಾ..’ ವಾಯುಮಾಲಿನ್ಯ ತಡೆಗಟ್ಟಲು ಪುನರುತ್ಪಾದಕ ಕೃಷಿ ಪದ್ಧತಿಯನ್ನು ಬಳಸಿಕೊಳ್ಳುವಂತೆ ತಿಳಿಸಿದರು. ಇದು ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ, ಬೆಳೆ ತ್ಯಾಜ್ಯವನ್ನು ಸುಡುವುದಕ್ಕೆ ಲಾಭದಾಯಕ ಪರ್ಯಾಯವನ್ನು ಒದಗಿಸುತ್ತದೆ. ಈ ವಿಷಯದಲ್ಲಿ @naandi_india @VikashAbraham ಸಹಾಯ ಮಾಡಲು ಸಿದ್ಧರಿದ್ದಾರೆ..ನಾವು ಮಾಡೋಣ’ ಎಂದು ಕೆಲವರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
To heal Delhi’s pollution, Regenerative Agriculture MUST be given a chance. It provides a remunerative alternative to stubble burning while simultaneously increasing soil productivity. @VikashAbraham of @naandi_india stands ready to help. Let’s do it!
pic.twitter.com/XvMPAghgdQ— anand mahindra (@anandmahindra) November 7, 2023
ದೆಹಲಿ-ಎನ್‌ಸಿಆರ್‌ನಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ, ನವೆಂಬರ್ 10 ರವರೆಗೆ ಶಾಲಾ ರಜೆಗಳನ್ನು ಘೋಷಿಸಲಾಗಿದೆ. ರಾಜ್ಯ ಸರ್ಕಾರವು ಕಚೇರಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ನವೆಂಬರ್ 13ರಿಂದ 20ರವರೆಗೆ ಸಮ-ಬೆಸ ಪದ್ಧತಿ ಜಾರಿಯಾಗಲಿದೆ. ಇವೆಲ್ಲದರ ನಡುವೆ ಆನಂದ್ ಮಹೀಂದ್ರಾ ನೀಡಿರುವ ಸಲಹೆಯನ್ನು ಸರ್ಕಾರ ಸ್ವೀಕರಿಸುತ್ತಾ ನೋಡಬೇಕು.