spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆನಂದ್ ಸಿಂಗ್ ಅವರಿಗೆ ಡಿಸಿಎಂ ಹುದ್ದೆ ನೀಡುವಂತೆ ಅಭಿಯಾನ ಪ್ರಾರಂಭ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ವರದಿ ಬಳ್ಳಾರಿ:

ಮಾಜಿ ಸಚಿವ ಆನಂದ್ ಸಿಂಗ್ ಅವರಿಗೆ ಡಿಸಿಎಂ ಸ್ಥಾನ ‌ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ.
ವಿಜಯನಗರ ನೂತನ ಜಿಲ್ಲೆ ರಚನೆಯ ರೂವಾರಿ, ಮಾಜಿ ಸಚಿವ ಆನಂದ್ ಸಿಂಗ್ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಅಭಿಮಾನಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರು ಅಭಿಯಾನ ಶುರು ಮಾಡಿದ್ದು, ವರೀಷ್ಠರ ನಿರ್ಧಾರ ಗಮನಸೆಳೆದಿದೆ. ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಭಾಜಪಾ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದರು. ಸಮ್ಮಿಶ್ರ ಸರ್ಕಾರ ಪಥನವಾಗಲು ಶಾಸಕ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಿದ ಧೀಮಂತ ನಾಯಕ, ವಿಜಯನಗರ ‌ನೂತನ ಜಿಲ್ಲೆ ರಚನೆಯ ರೂವಾರಿಗಳಿಗೆ ವರೀಷ್ಠರು ಡಿಸಿಎಂ ಸ್ಥಾನ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆನ್ ಲೈನ್ ಅಭಿಯಾನಕ್ಕೆ ಚಾಲನೆ ನೀಡಿ, ವರೀಷ್ಠರ ಗಮನಸೆಳೆದಿದ್ದಾರೆ. ಸಮ್ಮಿಶ್ರ ಸರ್ಕಾರ ಪಥನವಾಗಿ ಭಾಜಪ ಸರ್ಕಾರ ರಚನೆಗೆ ಶಾಸಕರು ರಾಜೀನಾಮೆಗೆ ಮುಂದಾದಾಗ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ‌ನೀಡಿದ್ದರು, ನಂತರ ಉಳಿದವರು ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ಮೈತ್ರಿ ಸರ್ಕಾರ‌ ಪಥನವಾಗಿ ಭಾಜಪ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದರು ಎಂದು‌ ಬೆಂಬಲಿಗರು ವರೀಷ್ಠರನ್ನು ಒತ್ತಾಯಿಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರವಾಸೋದ್ಯಮ, ಅರಣ್ಯ, ಮೂಲ ಸೌಕರ್ಯ ಮತ್ತು ಹಜ್ ಸಚಿವರಾಗಿ ಇತರರಿಗೆ‌ ಮಾದರಿಯಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಆನಂದ್ ಸಿಂಗ್ ಅವರು ಉಪ ಮುಖ್ಯಮಂತ್ರಿಯಾಗಲು ಎಲ್ಲ ಅರ್ಹತೆಯನ್ನು ‌ಹೊಂದಿದ್ದು, ವರೀಷ್ಠರು ಡಿಸಿಎಂ ಸ್ಥಾನ ನೀಡಬೇಕು ಎಂದು ಆನ್ ಲೈನ್ ಅಭಿಯಾನದ ಮೂಲಕ ಒತ್ತಾಯಿಸಿದ್ದಾರೆ.
ಕ್ಲೀನ್ ಹ್ಯಾಂಡ್: ಆನಂದ್ ಸಿಂಗ್ ಅವರು ಇಲ್ಲಿವರೆಗೂ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಕಾರ್ಯ ನಿರ್ವಹಿಸಿದ್ದಾರೆ. ಹಣದಾಸೆಗೆ ಎಂದೂ ರಾಜಕೀಯಕ್ಕೆ‌ ಬಂದಿಲ್ಲ, ಬಡವರ, ನಿರ್ಗತಿಕರ, ರೈತರ, ಮಕ್ಕಳ, ಯುವಕರ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ, ಕಷ್ಟದಲ್ಲಿರುವ ಯಾವುದೇ ವ್ಯಕ್ತಿಗಳು ಅವರ ಬಳಿ ತೆರಳಿದರೇ ಎಂದೂ ಅವರನ್ನು ಕೈಬಿಟ್ಟಿಲ್ಲ, ಕೈಲಾದಷ್ಟು ಅನೇಕ ರೀತಿಯಲ್ಲಿ ನೆರವಾಗುವ ಮೂಲಕ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ವಿಶೇಷವಾಗಿ ಪಶ್ಚಿಮ ತಾಲೂಕುಗಳ ಅಭಿವೃದ್ಧಿ ಹಾಗೂ ವಿಜಯನಗರ ಕ್ಷೇತ್ರದ ‌ಅಭಿವೃದ್ದಿ ನಿರೀಕ್ಷಿಸಿ ನೂತನ ಜಿಲ್ಲೆ ರಚಿಸಿ ರಾಜ್ಯದ‌ ಗಮನಸೆಳೆದಿದ್ದಾರೆ. ನೂತನ ‌ಜಿಲ್ಲೆ‌ ರಚನೆ ಕನಸು ಹೊತ್ತ ಜನರಿಗೆ ಆನಂದ್‌ ಸಿಂಗ್ ಅವರು‌ ಭರವಸೆ ‌ನೀಡಿದಾಗ, ಅನೇಕ ಜನರು ಆರೋಪ‌ ಪ್ರತ್ಯಾರೋಪಗಳನ್ನು ಮಾಡಿದರು. ಯಾವುದಕ್ಕೂ ಕುಗ್ಗದೇ ಕ್ಷೇತ್ರದ ‌ಜನರಿಗೆ‌ ನೀಡಿದ ಭರವಸೆಯಂತೆ ನಡೆದುಕೊಳ್ಳುವ ‌ಮೂಲಕ‌ ಮಾತಿನಂತೆ ನಡೆದುಕೊಂಡ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಧಿಕಾರದ ದರ್ಪ ವಿಲ್ಲ, ಸರಳ ಸಜ್ಜನಿಕೆ‌ ಸ್ವಭಾವವುಳ್ಳ ನಾಯಕರಿಗೆ ವರೀಷ್ಠರು ಆನಂದ್ ಸಿಂಗ್ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss