spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅನಂತಮೂರ್ತಿ ಅವರ ಪುಣ್ಯತಿಥಿ: ಎಂಟು ಪುಸ್ತಕ ಬಿಡುಗಡೆ ಕಾರ್ಯಕ್ರಮ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಹುಬ್ಬಳ್ಳಿ:

ಇಲ್ಲಿಯ ಸಾಹಿತ್ಯ ಬಂಡಾರದ ಅನಂತಮೂರ್ತಿ ಅವರ 23ನೇ ಪುಣ್ಯತಿಥಿ ಕಾರ್ಯಕ್ರಮ ವನ್ನು ಸೆ.17 ರಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮತ್ತು ಡಿ.ಎಸ್.ಕರ್ಕಿ ಸಾಹಿತ್ಯ ವೇದಿಕೆ ಜಂಟಿಯಾಗಿ ಎಂಟು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯ ಎಂ.ಎ. ಸುಬ್ರಹ್ಮಣ್ಯ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷವು ಡಿ.ಎಸ್. ಕರ್ಕಿ ಸಾಹಿತ್ಯದ ವೇದಿಕೆಯಿಂದ ಸಾಹಿತಿಗಳು, ಚಿಂತಕರಿಗೆ ಸನ್ಮಾನ ಮಾಡಲಾಗುತ್ತದೆ. ಅದರಂತೆ ಕನ್ನಡದ ಪರಿಚಾರಕ ಕೆ. ರಾಜಕುಮಾರ ಅವರಿಗೆ ಗೌರವಾರ್ಪಣೆ ಮಾಡಲಾಗುತ್ತದೆ ಎಂದರು.
ಈ ಕಾರ್ಯಕ್ರಮಕ್ಕೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮಿ, ಅಧ್ಯಕ್ಷತೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಯ ಮಹೇಂದ್ರ ಎಚ್.ಲದ್ದಡ ವಹಿಸಲಿದ್ದಾರೆ ಎಂದು ತಿಳಿಸಿದರು.
ಚಿಂತನೆ: ಕನ್ನಡ ಪರಿಚಾರಕರು ಕೆ. ರಾಜಕುಮಾರ ಕನ್ನಡದ ಪರಿಚಾರಿಕೆ: ನನಗೇಕೆ ಇಷ್ಟ?, ಆರ.ಎಸ್.ಎಸ್. ಹಿರಿಯ ಪ್ರಚಾರಕ ರವೀಂದ್ರ ರಾಷ್ಟ್ರೀಯತೆ ಹಾಗೆಂದರೇನು? ಮತ್ತು ಲೇಖಕರು ವೀಣಾ ಬನ್ನಂಜೆ ಹಿರಿಯರ ಹಾದಿ ಎಂಬ ವಿಷಯದ ಬಗ್ಗೆ ಸಂವಾದ ಮಾಡಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ಕಿ ಸಾಹಿತ್ಯ ವೇದಿಕೆಯ ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ, ಬಿ.ಎಸ್. ಮಾಳವಾಡ, ಏಕನಾಥ ಕಲಬುರಗಿ ಇದ್ದರು.
ಕಾರ್ಯಕ್ರಮ ಎಲ್ಲಿ: ಸೆ. 17 ರಂದು ಶುಕ್ರವಾರ ಸಂಜೆ 5.30ಕ್ಕೆ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss