ಕಾಶ್ಮೀರದದಲ್ಲಿ ಮುಂದುವರೆದ ಉಗ್ರಬೇಟೆ: ಅಡಗುದಾಣಕ್ಕೆ ನುಗ್ಗಿ ಹಿಜ್ಬುಲ್‌ ಉಗ್ರರ ಹತ್ಯೆಗೈದ ಭದ್ರತಾಪಡೆಗಳು

‌ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ -ಉಲ್-ಮುಜಾಹಿದ್ದೀನ್ (ಎಚ್‌ಎಂ)ನ ಇಬ್ಬರು ಭಯೋತ್ಪಾದಕರನ್ನು ಹೊಡೆದುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ವಿಜಯ್ ಕುಮಾರ್ ಮಾತನಾಡಿ, ಹತರಾದ ಉಗ್ರರನ್ನು ಎಚ್‌ಎಂ ಭಯೋತ್ಪಾದಕ ಸಂಘಟನೆಯ ಜುನೈದ್ ಮತ್ತು ಬಸಿತ್ ಭಟ್ ಎಂದು ಗುರುತಿಸಲಾಗಿದೆ. 2021ರಲ್ಲಿ ಅನಂತ್‌ನಾಗ್‌ನಲ್ಲಿ ಬಿಜೆಪಿಯ ಸರಪಂಚ್ ಗುಲಾಮ್ ರಸೂಲ್ ದಾರ್ ಮತ್ತು ಅವರ ಪತ್ನಿಯ ಹತ್ಯೆಯಲ್ಲಿ ಭಯೋತ್ಪಾದಕ ಬಸಿತ್ ಭಾಗಿಯಾಗಿದ್ದಾನೆ ಎಂದು ಕಾಶ್ಮೀರ ಐಜಿಪಿ ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್ 9 ರಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಿಜೆಪಿಯ ಸರಪಂಚ್ ಗುಲಾಮ್ ರಸೂಲ್ ದಾರ್ ಅವರ ಪತ್ನಿ ಮತ್ತು ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದರು.
ಗುರುವಾರ ಸಂಜೆ ಅನಂತನಾಗ್‌ನ ಕೋಕರ್‌ನಾಗ್ ಪ್ರದೇಶದ ಹಂಗಲ್‌ಗುಂಡ್‌ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಪ್ರಾರಂಭಗೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!