ಹೊಸದಿಗಂತ ಡಿಜಿಟಲ್ ಡೆಸ್ಕ್:
ಡ್ರಗ್ಸ್ ಕೇಸ್ಗೆ ಸಂಬಂಧಪಟ್ಟಂತೆ ಆರ್ಯನ್ ಖಾನ್ ಹಾಗೂ ಅನನ್ಯಾ ಪಾಂಡೆ ನಡುವಿನ ವಾಟ್ಸಾಪ್ ಸಂಭಾಷಣೆ ಲೀಕ್ ಆಗಿದೆ.
ಬಾಂಬೆ ಹೈಕೋರ್ಟ್ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಗೂ ಮುನ್ನವೇ ಚಾಟ್ ಬಹಿರಂಗವಾಗಿದ್ದು, ಅನನ್ಯಾ ಹಾಗೂ ಆರ್ಯನ್ ಗಾಂಜಾ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.
ಇದು ಏಪ್ರಿಲ್ನಲ್ಲಿ ನಡೆದ ಸಂಭಾಷಣೆಯಾಗಿದ್ದು, ಆರ್ಯನ್ ವೀಡ್ ಎಂದು ಹೇಳಿದ್ದಾರೆ. ಅದಕ್ಕೆ ಅನನ್ಯಾ ಅದು ಡಿಮ್ಯಾಂಡ್ನಲ್ಲಿದೆ ಎಂದಿದ್ದಾರೆ. ಅದಕ್ಕೆ ಆರ್ಯನ್ ನಿನ್ನಿಂದ ಗುಟ್ಟಾಗಿ ಅದನ್ನು ಪಡೆಯುತ್ತೇನೆ ಎಂದು ಹೇಳಿದ್ದಾರೆ. ಇನ್ನೊಂದು ಚಾಟ್ನಲ್ಲಿ ವೀಡ್ ತಂದಿದ್ದೀಯಾ ಎಂದು ಅನನ್ಯಾಗೆ ಆರ್ಯನ್ ಕೇಳಿದ್ದು, ಅನನ್ಯಾ ತರ್ತಾ ಇದ್ದೇನೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಮತ್ತೊಬ್ಬ ಸ್ನೇಹಿತನ ಜೊತೆಯೂ ಆರ್ಯನ್ ಚಾಟ್ ಮಾಡಿದ್ದು, ಕೊಕೈನ್ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.