ದಿಲ್ಲಿ ನಂತರ ಈಗ ಆಂಧ್ರ ಸರಕಾರದಿಂದ ಮುಸ್ಲಿಮರಿಗೆ ರಂಜಾನ್ ವಿನಾಯಿತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್
ಅಮರಾವತಿ: ಎಲ್ಲಾ ಮುಸ್ಲಿಂ ಸರಕಾರಿ ನೌಕರರು, ಶಿಕ್ಷಕರು ಮತ್ತು ಗುತ್ತಿಗೆ ನೌಕರರು ಏ. 3ರಿಂದ ಮೇ 2ರವರೆಗೆ ರಂಜಾನ್ ತಿಂಗಳ ಎಲ್ಲಾ ಕೆಲಸದ ದಿನಗಳಲ್ಲಿ ಸಂಜೆ ಒಂದು ತಾಸು ಮೊದಲು ಕಚೇರಿಗಳು / ಶಾಲೆಗಳನ್ನು ಬಿಡಲು ಅನುಮತಿ ನೀಡಿ ಆಂಧ್ರ ಪ್ರದೇಶ ಸರಕಾರ ಆದೇಶ ಹೊರಡಿಸಿದೆ.
ಏ. 3ರಿಂದ ಮೇ 2ರವರೆಗೆ ಅಗತ್ಯ ಆಚರಣೆಗಳನ್ನು ನಿರ್ವಹಿಸಲು, ಈ ಅವಧಿಯಲ್ಲಿ ಸೇವೆಗಳ ಅಗತ್ಯತೆಗಳ ಕಾರಣದಿಂದಾಗಿ ಅವರ ಉಪಸ್ಥಿತಿಯ ಅಗತ್ಯವಿರುವಾಗ ಹೊರತುಪಡಿಸಿ, ಇಸ್ಲಾಂ ಧರ್ಮವನ್ನು ಪ್ರತಿಪಾದಿಸುವ ಎಲ್ಲಾ ಸರಕಾರಿ ನೌಕರರು, ಶಿಕ್ಷಕರು, ಗುತ್ತಿಗೆ ಮತ್ತು ಹೊರಗುತ್ತಿಗೆಯಲ್ಲಿ ನೇಮಕಗೊಂಡಿರುವ ಸಿಬ್ಬಂದಿ ರಂಜಾನ್ ಪವಿತ್ರ ಮಾಸದಲ್ಲಿ ಎಲ್ಲಾ ಕೆಲಸದ ದಿನಗಳಲ್ಲಿ ಸಂಜೆ ಒಂದು ತಾಸು ಮುಂಚಿತವಾಗಿ ಕಚೇರಿಗಳು / ಶಾಲೆಗಳನ್ನು ಬಿಡಲು ಸರಕಾರವು ಈ ಮೂಲಕ ಅನುಮತಿ ನೀಡುತ್ತದೆ ಎಂದು ಆಂಧ್ರ ಪ್ರದೇಶ ಸರಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಇದಕ್ಕೂ ಮೊದಲು ದಿಲ್ಲಿ ಜಲ ಮಂಡಳಿಯು ರಂಜಾನ್ ಸಮಯದಲ್ಲಿ ಎಲ್ಲಾ ಮುಸ್ಲಿಂ ಉದ್ಯೋಗಿಗಳಿಗೆ ಪ್ರತಿದಿನ ಎರಡು ತಾಸುಗಳ ಕಾಲ ವಿರಾಮ ನೀಡಿತ್ತು. ಸೋಮವಾರ, ಡಿಜೆಪಿ ಮುಸ್ಲಿಂ ಉದ್ಯೋಗಿಗಳಿಗೆ ರಂಜಾನ್ ಸಮಯದಲ್ಲಿ ಅಂದರೆ ಏ. 3ರಿಂದ ಮೇ 2 ರವರೆಗೆ ಅಥವಾ ಈದುಲ್ ಫಿತ್ರ್ ದಿನಾಂಕವನ್ನು ಘೋಷಿಸುವವರೆಗೆ ಎರಡು ತಾಸುಗಳ ಕಾಲ ವಿರಾಮಕ್ಕೆ ಅನುಮತಿಸಿತ್ತು. ಕಚೇರಿ ಕೆಲಸಕ್ಕೆ ತೊಂದರೆಯಾಗದಂತೆ ಉಳಿದ ಕಚೇರಿ ಸಮಯದಲ್ಲಿ ಅವರು ತಮ್ಮ ಕೆಲಸವನ್ನು ಪೂರ್ಣಗೊಳಿಸುವ ಷರತ್ತು ವಿಧಿಸಲಾಗಿತ್ತು.
ಮಂಗಳವಾರ ಇನ್ನೊಂದು ಸುತ್ತೋಲೆ ಹೊರಡಿಸಿ, ರಂಜಾನ್ ದಿನಗಳಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ವಿರಾಮ ಘೋಷಿಸಿದ್ದನ್ನು ಹಿಂಪಡೆದಿತ್ತು.  ಹಿಂದಿನ ಸುತ್ತೋಲೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಹಿಂಪಡೆಯಲು ನಿರ್ಧರಿಸಿದೆ ಎಂದು ಹೇಳಿತ್ತು.
ಇದೀಗ ಆಂಧ್ರ ಸರಕಾರ ಮುಸ್ಲಿಂ ಉದ್ಯೋಗಿಗಳಿಗೆ ರಂಜಾನ್ ತಿಂಗಳ ಉಪವಾಸಕ್ಕೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!