ಕಾಸರಗೋಡಿನಲ್ಲಿ ಅಂಜುಶ್ರೀ ಸಾವು: ಬಹಿರಂಗವಾಯಿತು ಸಾವಿನ ಕಾರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವನ್ನೇ ಬೆಚ್ಚಿಬೀಳಿಸಿದ ಕೇರಳದ ಕಾಸರಗೋಡಿನಲ್ಲಿ ಚಿಕನ್ ಬಿರಿಯಾನಿ ತಿಂದು ಯುವತಿ ಸಾವನ್ನಪ್ಪಿದ ಪ್ರಕರಣ ಮತ್ತಷ್ಟು ರೋಚಕತೆ ಪಡೆದಿದ್ದು, ಅಂಜುಶ್ರೀ ಪಾರ್ವತಿಯ ಸಾವಿಗೆ ಇಲಿ ಪಾಷಾಣ ಸೇವನೆ ಕಾರಣ ಎಂದು ರಾಸಾಯನಿಕ ತಪಾಸಣಾ ವರದಿಯಿಂದ ತಿಳಿದು ಬಂದಿದೆ.

ಜನವರಿ 7ರಂದು ಅಂಜುಶ್ರೀ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಟ್ಟಿದ್ದಳು. ಕೋಝಿಕ್ಕೊಡ್ ನ ಫಾರೆನ್ಸಿಕ್ ಪ್ರಯೋಗಾಲಯದಲ್ಲಿ ನಡೆಸಿದ ತಪಾಸಣೆಯಿಂದ ಇಲಿ ವಿಷ ಸೇವನೆ ಅಂಜುಶ್ರೀ ಸಾವಿಗೆ ಕಾರಣ ಎಂದು ಖಚಿತ ಪಡಿಸಿದೆ. ಈ ಕುರಿತ ವರದಿ ತನಿಖಾ ತಂಡಕ್ಕೆ ಲಭಿಸಿದೆ.

ಮಂಜೇಶ್ವರ ಗೋವಿಂದ ಪೈ ಕಾಲೇಜಿನ ವಿದ್ಯಾರ್ಥಿನಿ (Student)ಯಾಗಿದ್ದ ಪೆರುಂಬಳ ಬೇನೂರಿನ ಅಂಜುಶ್ರೀ ಪಾರ್ವತಿ ಕಾಸರಗೋಡು ನಗರ ಹೊರ ವಲಯದ ಹೋಟೆಲೊಂದರಿಂದ ಆನ್‌ಲೈನ್‌ನಲ್ಲಿ ಖರೀದಿಸಿದ್ದ ಆಹಾರ (Food) ಸೇವಿಸಿರುವುದು ಸಾವಿಗೆ ಕಾರಣ ಎಂದು ಕುಟುಂಬಸ್ಥರು ಮೇಲ್ಪರಂಬ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಹೋಟೆಲ್ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದರು. ಆದರೆ ಆಹಾರದಿಂದ ಸಾವು (Death) ಸಂಭವಿಸಿಲ್ಲ ಎಂದು ತನಿಖೆಯಿಂದ ದೃಢಪಟ್ಟಿತ್ತು.

ಆರಂಭದಲ್ಲಿ ಫುಡ್​ ಪಾಯಿಸನ್​ನಿಂದ ಕೇರಳದ ಕಾಸರಗೋಡಿನಲ್ಲಿ ಯುವತಿ (Girl)ಯೊಬ್ಬಳು ಮೃತಪಟ್ಟಿರುವುದಾಗಿ ಸುದ್ದಿಯಾಗಿತ್ತು. ಉದುಮದಲ್ಲಿರುವ ಹೋಟೆಲ್​ ಒಂದರಲ್ಲಿ ಆನ್​ಲೈನ್​ ಮೂಲಕ ಚಿಕನ್​ ಆಹಾರ ತರಿಸಿ ಅಂಜುಶ್ರೀ ಸೇವಿಸಿದ್ದಳು. ಇದಾದ ಬಳಿಕ ಆಕೆಯ ಆರೋಗ್ಯ (Health)ದಲ್ಲಿ ಏರುಪೇರು ಕಂಡುಬಂದಿತ್ತು.ಪರಿಸ್ಥಿತಿ ಗಂಭೀರವಾದ ಬೆನ್ನಲ್ಲೇ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!