ಅಂಕೋಲಾ | ವಿಭೂತಿ ಜಲಪಾತದಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆ
ಹೊಸ ದಿಗಂತ ವರದಿ,ಅಂಕೋಲಾ: ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಭೂತಿ ಜಲಪಾತದ ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿ ಜೀವ ಉಳಿಸಿದ್ದಾರೆ. ತಮಿಳುನಾಡು ಮೂಲದ 8 ಜನ ಪ್ರವಾಸಿಗರ ತಂಡ ವಿಭೂತಿ ಪಾಲ್ಸ್ ಪ್ರವಾಸಕ್ಕೆ ಬಂದು ಜಲಪಾತದ ನೀರಿಗಿಳಿದ ಸಂದರ್ಭದಲ್ಲಿ ವಿಘ್ನೇಶ ಎಂಬಾತ ನೀರಿನಲ್ಲಿ ಅಪಾಯಕ್ಕೆ ಸಿಲುಕಿದ್ದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ವಿಜಯ ನಾಯಕ ತಕ್ಷಣ ಕಾರ್ಯ ಪೃವೃತ್ತರಾಗಿ ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಣೆ ಮಾಡಿದ್ದಾರೆ.
Copy and paste this URL into your WordPress site to embed
Copy and paste this code into your site to embed