ವಾಚ್‌ ಮೇಲೆ ಕಣ್ಣು ಹಾಕಿದ ಡಿಎಂಕೆ ನಾಯಕರಿಗೆ ಸವಾಲೆಸೆದ ಅಣ್ಣಾಮಲೈ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ತಮಿಳು ನಾಡು ರಾಜ್ಯ ರಾಜಕಾರಣದಲ್ಲಿ ಸದ್ಯ ಸದ್ದು ಮಾಡುತ್ತಿರುವ ವಿಚಾರ ಅಂದರೆ ಅದು ಮಾಜಿ ಐಪಿಎಸ್‌ ಅಧಿಕಾರಿ, ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಧರಿಸುತ್ತಿರುವ 5 ಲಕ್ಷ ರೂ. ಮೌಲ್ಯ ವಾಚ್‌.

ಅಲ್ಲಿಯ ಇಂಧನ ಖಾತೆಯ ಸಚಿವ ವಿ ಸೆಂಥಿಲ್ ಬಾಲಾಜಿ ಅವರು, ‘ನಮ್ಮ ಬಳಿ ನಾಲ್ಕು ಮೇಕೆಗಳಿವೆ ಎಂದು ಹೇಳುವ ರಾಜ್ಯ ಬಿಜೆಪಿ ಮುಖ್ಯಸ್ಥರು 5 ಲಕ್ಷ ರೂಪಾಯಿಗೆ ಬೆಲೆಬಾಳುವ ವಾಚ್ ಖರೀದಿಸಿದ್ದು ಹೇಗೆ’ ಎಂದು ಪ್ರಶ್ನಿಸುವ ಮೂಲಕ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದರು.
ಇದೀಗ ಈ ಎಲ್ಲಾ ಪಶ್ನೆ ವಿರೋಧಗಳಿಗೆ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದಿರುವ ಅಣ್ಣಾಮಲೈ ‘ ನಾನು ಹಣವನ್ನು ಪಾವತಿ ಮಾಡಿಯೇ ಈ ವಾಚ್‌ ಖರೀದಿಸಿದ್ದೇನೆ. ನಾನು ದೇಶ ಭಕ್ತನಾಗಿದ್ದು ರಫೇಲ್‌ ಜೆಟ್‌ ಹಾರಿಸಲು ಸಾಧ್ಯವಿಲ್ಲದ ಕಾರಣ ಈ ವಾಚನ್ನು(Rafale watch) ಖರೀದಿಸಿದ್ದೇನೆ. ನಾನು ಸಾಯುವವರೆಗೂ ಈ ವಾಚ್‌ ನನ್ನ ಬಳಿಯೇ ಇರಲಿದೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

‘ಈ ರಫೇಲ್‌ ವಾಚನ್ನು ನಾನು ತಮಿಳುನಾಡು ಬಿಜೆಪಿ ಅಧ್ಯಕ್ಷನಾಗುವ ಮೊದಲು ಮೇ, 2021 ರಲ್ಲಿ ಖರೀದಿ ಮಾಡಿದ್ದೇನೆ. ಈ ವಾಚ್‌ ಖರೀದಿಯ ಬಿಲ್‌ ಜೊತೆಗೆ ನನ್ನ ಎಲ್ಲಾ ಜೀವಮಾನದ ಆದಾಯ ತೆರಿಗೆ ಪಾವತಿಗಳು, 10 ವರ್ಷದ ನನ್ನ ಎಲ್ಲಾ ಬ್ಯಾಂಕ್ ಬ್ಯಾಲೆನ್ಸ್‌ ಫೋಟೋಕಾಪಿಗಳು ತೋರಿಸುತ್ತೇನೆ. 2011ರ ಆಗಸ್ಟ್‌ನಿಂದ ಐಪಿಎಸ್‌ ಅಧಿಕಾರಿಯಾಗಿ ರಾಜೀನಾಮೆ ನೀಡುವವರೆಗೂ ನನ್ನ ಎಲ್ಲಾ ಗಳಿಕೆಗಳು ಮತ್ತು ನಾನು ರಾಜೀನಾಮೆ ನೀಡುವವರೆಗೆ ಬ್ಯಾಂಕ್‌ ಬ್ಯಾಲೆನ್ಸ್‌ ವಿವರ, ಕುರಿ ಮತ್ತು ಹಸುಗಳ ಸಂಖ್ಯೆ ಸೇರಿದಂತೆ ನಾನು ಹೊಂದಿರುವ ಎಲ್ಲಾ ಸ್ಥಿರಾಸ್ತಿಗಳ ವಿವರವನ್ನು ತಮಿಳುನಾಡಿನಲ್ಲಿ ನಡೆಸಲಿರುವ ಪಾದಯಾತ್ರೆಯ ಆರಂಭದ ದಿನ ಬಿಡುಗಡೆ ಮಾಡುತ್ತೇನೆ. ಯಾರಾದರೂ ನನ್ನ ಆಸ್ತಿಗಿಂತ 1 ಪೈಸೆ ಆಸ್ತಿ ಹೆಚ್ಚಿದೆ ಎಂದು ಸಾಬೀತು ಪಡಿಸಿದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ನೀಡುತ್ತೇನೆ. ಅಲ್ಲದೇ ಡಿಎಂಕೆ ನಾಯಕರು ಈ ರೀತಿಯಾಗಿ ತಮ್ಮ ಆಸ್ತಿಗಳ ವಿವರನ್ನು ಬಹಿರಂಗ ಪಡಿಸಲಿ ಎಂದು ವಿರೋಧಿಗಳಿಗೆ ಸವಾಲು ಎಸೆದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!