ಹೊಸದಿಗಂತ ಡಿಜಿಟಲ್ ಡೆಸ್ಕ್
2023 ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರಕ್ಕೆ ಎಸ್.ಡಿ.ಪಿ.ಐ ಪಕ್ಷದ ಅಭ್ಯರ್ಥಿಯನ್ನು ನಾಳೆ ಸಂಜೆ 5 ಗಂಟೆಗೆ ಎಸ್.ಡಿ.ಪಿ.ಐ ರಾಜ್ಯಧ್ಯಕ್ಷ ಅಬ್ದುಲ್ ಮಜೀದ್ ಉಡುಪಿಯಲ್ಲಿ ಘೋಷಿಸಲಿದ್ದಾರೆ ಎಂದು ಎಸ್.ಡಿ.ಪಿ.ಐ ಕಾಪು ಕಾರ್ಯಾಧ್ಯಕ್ಷ ಹನೀಫ್ ತಿಳಿಸಿದ್ದಾರೆ.
ಅವರು ಬುಧವಾರ ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಈಗಾಗಲೇ 3 ಜನರ ಹೆಸರನ್ನು ರಾಜ್ಯಧ್ಯಕ್ಷರಿಗೆ ನೀಡಲಾಗಿದೆ. ಅವರು ಚರ್ಚಿಸಿ, ಅಂತಿಮ ಹೆಸರನ್ನು ಬಿಡುಗಡೆಗೊಳಿಸಲಿದ್ದಾರೆ. ಕಾಪು ಪುರಸಭೆಯಲ್ಲಿ 3 ಸದಸ್ಯರು, 3 ಗ್ರಾ.ಪಂ ಗಳಲ್ಲಿ ಒಟ್ಟು 8 ಎಸ್.ಡಿ.ಪಿ.ಐ ಬೆಂಬಲಿತ ಸದಸ್ಯರಿದ್ದಾರೆ. ಅವರೆಲ್ಲರೂ, ಜನಪರ ಸೇವೆ ಮಾಡುತ್ತಿದ್ದು, ಮುಸ್ಲಿಮೇತರರು ಎಸ್.ಡಿ.ಪಿ.ಐ ಪಕ್ಷಕ್ಕೆ ಮತ ಹಾಕಲು ಉತ್ಸುಕರಾಗಿದ್ದಾರೆ ಎಂದರು.
ಕರೋನಾ ಅವಧಿಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಉಚಿತ ಆ್ಯಂಬುಲೆನ್ಸ್, ಕಿಟ್ ವಿತರಣೆ ಮಾಡಿ ಬಡವರಿಗೆ ಸಹಾಯ ಮಾಡಿದ್ದೇವೆ. ಈ ಎಲ್ಲಾ ಅಂಶಗಳನ್ನು ಕಾಪುವಿನ ಜನತೆ ಗಮನದಲ್ಲಿಟ್ಟುಕೊಂಡಿದ್ದಾರೆ. ಅಭಿವೃದ್ಧಿಗೆ ಎಸ್.ಡಿ.ಪಿ.ಐ ನ ಮೂಲ ಉದ್ದೇಶ ಎಂದು ತಿಳಿಸಿದರು.