Friday, August 12, 2022

Latest Posts

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 2019-2020ರ ವಾರ್ಷಿಕ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಪ್ರಕಟ

ಹೊಸ ದಿಗಂತ ವರದಿ, ಮಂಗಳೂರು:

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 2019 ಮತ್ತು 2020ರ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನವನ್ನು
ಪ್ರಕಟಿಸಿದೆ. ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

2019 ಸಾಲಿನ ಪ್ರಶಸ್ತಿ ಪುರಸ್ಕೃತರು
ಡಾ|ಎಸ್.ಆರ್.ವಿಘ್ನರಾಜ (ತುಳು ಸಾಹಿತ್ಯ), ದಿ.ತಿಮ್ಮಪ್ಪ ಗುಜರನ್ (ತುಳು ಯಕ್ಷಗಾನ ಕ್ಷೇತ್ರ) ಮತ್ತು ಹಿರಿಯಡ್ಕ ಗುರುವ ಕೊರಗ (ತುಳು ಜಾನಪದ). ಈ ಸಾಲಿನ ಪುಸ್ತಕ ಬಹುಮಾನ ತುಳು ಕವನ ವಿಭಾಗದಲ್ಲಿ ಕಮಲಾಕ್ಷಿ ವಿ.ಕಣ್ವತೀರ್ಥ ಅವರ ‘ಪನಿ ಮುತ್ತು ಮಾಲೆ’ಗೆ ಸಂದಿದೆ.
2020ನೆಯ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ರಾಮಚಂದರ್ ಬೈಕಂಪಾಡಿ (ತುಳು ಸಾಹಿತ್ಯ), ತುಂಗಪ್ಪ ಬಂಗೇರ (ತುಳು ನಾಟಕ) ಮತ್ತು ಆನಂದ ಪೂಜಾರಿ ಹಳೆಯಂಗಡಿ (ತುಳು ಜಾನಪದ) ಇವರನ್ನು ಆಯ್ಕೆ ಮಾಡಲಾಗಿದೆ. ಪುಸ್ತಕ ಬಹುಮಾನಕ್ಕೆ ಡಾ|ಕೆ.ಚಿನ್ನಪ್ಪ ಗೌಡ ಅವರ ತುಳು ಕವನ ಸಂಕಲನ ‘ಕೆಲೆಪು ಪರೆಡೆ ಕೆಲೆಪು’ ಆಯ್ಕೆ ಆಗಿದೆ ಎಂದು ದಯಾನಂದ ಕತ್ತಲ್‌ಸಾರ್ ವಿವರಿಸಿದರು.
2018ರ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಹಿಂದೆಯೇ ಪ್ರಕಟಿಸಲಾಗಿದೆ. ತುಳು ಸಾಹಿತ್ಯ ಕ್ಷೇತ್ರದಲ್ಲಿ ಲಲಿತಾ ಆರ್.ರೈ, ತುಳು ನಾಟಕ ಕ್ಷೇತ್ರದಲ್ಲಿ ರತ್ನಾಕರ ರಾವ್ ಕಾವೂರು ಮತ್ತು ತುಳು ಸಿನೇಮಾ ಕ್ಷೇತ್ರದಲ್ಲಿ ಎ.ಕೆ.ವಿಜಯ ಪ್ರಶಸ್ತಿ ಸ್ವೀಕರಿಸುವರು. ಶಾಂತಾರಾಮ ವಿ.ಶೆಟ್ಟಿ ಅವರ ಕವನ ಸಂಕಲನ ‘ಮಣ್ಣ ಬಾಜನೊ’ ಮತ್ತು ರಾಜಶ್ರೀ ಟಿ.ರೈ ಅವರ ಕಾದಂಬರಿ ‘ಕೊಂಬು’ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ ಎಂದು ಅವರು ನುಡಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss