ಬೆಂಗಳೂರಿನಲ್ಲಿ ಮತ್ತೊಂದು ಅವಘಡ: ರಸ್ತೆಯ ಸಿಂಕ್ ಹೋಲ್ ಗೆ ಬಿದ್ದ ಬೈಕ್ ಸವಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಂಗಳೂರಿನಲ್ಲಿ ಇತ್ತೀಚೆಗೆ ಮೆಟ್ರೋ ಪಿಲ್ಲರ್ ಕುಸಿದು ಇಬ್ಬರು ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೇ ಬ್ರಿಗೇಡ್ ರಸ್ತೆಯಲ್ಲಿ ಸಿಂಕ್ ಹೋಲ್ (ರಸ್ತೆ ಕುಳಿ) ಸಮಸ್ಯೆ ಎದುರಾಗಿದೆ.
ಬ್ರಿಗೇಡ್ ರಸ್ತೆಯಲ್ಲಿ ಏಕಾ ಏಕಿ ಸಿಂಕ್ ಹೋಲ್ ಸಮಸ್ಯೆ ಕಾಣಿಸಿಕೊಂಡಿದ್ದು, ಓರ್ವ ದ್ವಿಚಕ್ರ ವಾಹನ ಸವಾರ ಸಿಂಕ್ ಹೋಲ್ ಒಳಗೆ ಬಿದ್ದು ಗಾಯಗೊಂಡಿದ್ದಾರೆ.
ಗಾಯಗೊಂಡ ವ್ಯಕ್ತಿಯನ್ನು ಫೋರ್ಟಿಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು.
ವರದಿಗಳ ಪ್ರಕಾರ, ಬೈಕರ್ ನ್ನು ಪುನೀತ್ ಎಂದು ಗುರುತಿಸಲಾಗಿದ್ದು, ಮಧ್ಯಾಹ್ನ 12:15 ರ ವೇಳೆಗೆ ಬ್ರಿಗೇಡ್ ಟವರ್ಸ್ ನ ಬಳಿ ಈ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!