ಮಂಗಳೂರಿನಲ್ಲಿ ಮತ್ತೊಂದು ಆಕ್ಸಿಡೆಂಟ್: ಡಿವೈಡರ್ ಹಾರಿ ಸ್ಕೂಟರ್ ಸವಾರೆಗೆ ಡಿಕ್ಕಿ ಹೊಡೆದ ಕಾರು…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಂಗಳೂರಿನಲ್ಲಿ ನಿನ್ನೆಯಷ್ಟೇ ಭೀಕರ ರಸ್ತೆ ಅಪಘಾತ ನಡೆದು ಮಾಸುವ ಮುನ್ನವೇ ಇಂದು ಮತ್ತೊಂದು ಭೀಕರ ಅಪಘಾತ ನಡೆದಿದ್ದು, ವೇಗವಾಗಿ ಬಂದ ಬಿಎಂಡಬ್ಲ್ಯು ಕಾರು ಡಿವೈಡರ್ ಮೇಲಕ್ಕೆ ಹಾರಿ ಮತ್ತೊಂದು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳೂರಿನ ಬಲ್ಲಾಳ್‌ಬಾಗ್‌ನಲ್ಲಿ ನಡೆದಿದೆ.


ಈ ವೇಳೆ ಬಿಎಂಡಬ್ಲ್ಯು ಕಾರು ಚಾಲಕ ಮದ್ಯದ ಅಮಲಿನಲ್ಲಿದ್ದ ಎಂಬ ಶಂಕೆ ವ್ಯಕ್ತವಾಗಿದ್ದು, ರಸ್ತೆ ದಾಟಲು ಡಿವೈಡರ್ ಮೇಲೆ ನಿಂತಿದ್ದ ಇನ್ನೋರ್ವ ಮಹಿಳೆಯು ಕೂದಲೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ನಗರ ಸಂಚಾರ ಪೊಲೀಸರು ಕಾರು ಚಾಲಕನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!