ಅಮೆರಿಕದಲ್ಲಿ ಮತ್ತೊಂದು ಬ್ಯಾಂಕಿಗೆ ಬೀಗ: ಕ್ರಿಪ್ಟೋ ಜಗತ್ತಿಗೆ ಮಹಾ ಆಘಾತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಷ್ಟದಿಂದಾಗಿ ಅಮೆರಿಕದ ಸಿಲಿಕಾನ್‌ ವ್ಯಾಲೀ ಬ್ಯಾಂಕ್‌ ಸ್ಥಗಿತಗೊಂಡಿದ್ದು ಜಗತ್ತಿನ ಹಲವೆಡೆ ಆತಂಕ ಸೃಷ್ಟಿಸಿದೆ. ಈಗ ಈ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದ್ದು ಪ್ರಮುಖ ಕ್ರಿಪ್ಟೋ ಕರೆನ್ಸಿ ಪ್ಲಾಟ್‌ಫಾರ್ಮ್‌ ಗಳು ಗ್ರಾಹಕರಾಗಿದ್ದ ಸಿಗ್ನೇಚರ್‌ ಬ್ಯಾಂಕಿಗೆ ಅಮೆರಿಕದ ನಿಯಂತ್ರಕ ಅಧಿಕಾರಿಗಳು ಬೀಗಹಾಕಿದ್ದಾರೆ. ಇದು ಅಮೆರಿಕದ ಬ್ಯಾಂಕಿಂಗ್‌ ಇತಿಹಾಸದಲ್ಲಿ ಮೂರನೇ ಅತಿದೊಡ್ಡ ವೈಫಲ್ಯ ಎನ್ನಲಾಗುತ್ತಿದೆ.

ನ್ಯೂಯಾರ್ಕ್‌ ನ ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (FDIC) ಸಿಗ್ನೇಚರ್ ಬ್ಯಾಂಕನ್ನು ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಹಣಕಾಸು ವಿಷಯದಲ್ಲಿನ ನಷ್ಟಕ್ಕೆ ಸಂಬಮಧಿಸಿದಂತೆ ಬ್ಯಾಂಕನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಕುಸಿತದ ನಂತರ ಸಿಗ್ನೇಚರ್‌ ಬ್ಯಾಂಕಿನ ಷೇರುಗಳೂ ಭಾರೀ ಪ್ರಮಾಣದಲ್ಲಿ ಕುಸಿದಿದ್ದು ಠೇವಣಿದಾರರ ಹಿತ ಕಾಪಾಡಲು ಹಣಕಾಸು ನಿಯಂತ್ರಕ ಅಧಿಕಾರಿಗಳು ಬ್ಯಾಂಕನ್ನು ಸ್ಥಗಿತಗೊಳಿಸಿರುವುದಾಗಿ ಹೇಳಿದ್ದು ಯಾವುದೇ ಠೇವಣಿದಾರರು ಆತಂಕ ಪಡಬೇಕಿಲ್ಲ. ನಷ್ಟವನ್ನು ತೆರರಿಗೆದಾರರ ಹಣದಿಂದ ಭರಿಸುವುದಿಲ್ಲ ಎಂದು ಖಜಾನೆ ಇಲಾಖೆ ಭರವಸೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!