ಮತ್ತೊಂದು ಸುಸಜ್ಜಿತ ಕ್ಯಾಂಪಸ್ ನಿರ್ಮಾಣಕ್ಕೆ ಸಜ್ಜಾಗುತ್ತಿದೆ ಸುರತ್ಕಲ್‌ನ ಎನ್‌ಐಟಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುರತ್ಕಲ್‌ನ ತಾಂತ್ರಿಕ ಸಂಸ್ಥೆ ಎನ್‌ಐಟಿಕೆ ಮತ್ತೊಂದು ಕ್ಯಾಂಪಸ್‌ನ್ನು ಆರಂಭಿಸಲು ಯೋಜಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ ಕೋರ್ಸ್‌ಗಳನ್ನು ಪ್ರತ್ಯೇಕವಾಗಿ ನೀಡಲು ನೂತನ ಕ್ಯಾಂಪಸ್ ಆರಂಭವಾಗಲಿದೆ.

ಇದಕ್ಕಾಗಿ ಮೂಡುಬಿದರೆ-ಮುಲ್ಕಿ ಕ್ಷೇತ್ರದ ವ್ಯಾಪ್ತಿಯ ಕಲ್ಲಮುಂಡ್ಕೂರಿನಲ್ಲಿ ಎರಡು ಸ್ಥಳಗಳನ್ನು ಗುರುತಿಸಲಾಗಿದೆ. ಇದು ಪ್ರಸ್ತುತ ಸುರತ್ಕಲ್‌ನಲ್ಲಿರುವ ನ್ಯಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಿಂದ 20 ಕಿ.ಮೀ ದೂರದಲ್ಲಿದೆ. ಸುಮಾರು 60 ಹಾಗೂ 80 ಎಕರೆ ಇರುವ ಎರಡು ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕ್ಯಾಂಪಸ್ ವಿಸ್ತರಣೆಗೆ ದಶಕದ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಆದರೆ ಇದೀಗ ಕ್ಯಾಂಪಸ್ ಯೋಜನೆ ಮುನ್ನೆಲೆಗೆ ಬಂದಿದೆ ಎಂದು ಎನ್‌ಐಟಿಕೆ ಮಾಜಿ ಪ್ರಭಾರಿ ನಿರ್ದೇಶಕ ಉದಯ್ ಕುಮಾರ ಆರ್. ಯರಗಟ್ಟಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!