ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್
ಜಮ್ಮು-ಕಾಶ್ಮೀರದ ಅರ್ನಿಯಾ ವಲಯದ ಅಂತಾರಾಷ್ಟ್ರೀಯ ಗಡಿ ಸಮೀಪ ಮತ್ತೊಂದು ಡ್ರೋನ್ ಪತ್ತೆಯಾಗಿದೆ. ಬಿಎಸ್ಎಫ್ ಯೋಧರು ಅದರತ್ತ ಗುಂಡಿನ ದಾಳಿ ನಡೆಸಿದ್ದಾರೆ.
ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಬಿಎಸ್ಎಫ್ ಯೋಧರು ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ ಡ್ರೋನ್ ನಿರ್ವಾಹಕ ಅದನ್ನು ಹಿಂದಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಡ್ರೋನ್ ಪಾಕಿಸ್ತಾನದ ಕಡೆಗೆ ಹಿಂತಿರುಗಿರುವುದನ್ನು ಗಮನಿಸಲಾಗಿದೆ.
ಜುಲೈ 13ರ ಮಧ್ಯರಾತ್ರಿ ಅರ್ನಿಯಾ ಸೆಕ್ಟರ್ನ ನಮ್ಮ ಗಡಿಯಿಂದ 200 ಮೀಟರ್ ಒಳಗೆ ಮಿಣುಕುತ್ತಿರುವ ಕೆಂಪು ಬಣ್ಣದ ದೀಪವನ್ನು ನಮ್ಮ ಯೋಧರು ಗಮನಿಸಿದರು. ತಕ್ಷಣ ಎಚ್ಚೆತ್ತುಕೊಂಡ ಯೋಧರು ಅದರತ್ತ ಗುಂಡಿನ ದಾಳೆ ಮಾಡಿದರು. ತಕ್ಷಣ ಡ್ರೋನ್ ಹಿಮ್ಮುಖವಾಗಿ ಚಲಿಸಿತು.
ಸ್ಥಳವನ್ನು ಶೋಧಿಸಿದಾಗ ಏನೂ ಕೂಡ ಪತ್ತೆಯಾಗಲಿಲ್ಲ ಎಂದು ಬಿಎಸ್ಎಫ್ ಪತ್ರಿಕಾ ಹೇಳಿಕೆಯನ್ನು ನೀಡಿದೆ.
ಜೂನ್ ನಲ್ಲಿ ಭಾರತ ವಾಯುಪಡೆ ನಿಲ್ದಾಣವನ್ನು ಎರಡು ಸ್ಫೋಟಗಳು ನಡುಗಿಸಿದ ನಂತರ ಜಮ್ಮುವಿನ ಮೇಲೆ ಡ್ರೋನ್ ಸುಳಿದಾಡುತ್ತಿರುವುದು ಇದು ಆರನೇ ಬಾರಿಗೆ ಕಂಡುಬಂದಿದೆ.