Friday, March 1, 2024

ಬ್ಯಾಡಗಿಯಲ್ಲಿ ಮತ್ತೊಂದು ನೈತಿಕ ಪೊಲೀಸಗಿರಿ: 7 ಜನರ ಬಂಧನ

ಹೊಸದಿಗಂತ ವರದಿ ಹಾವೇರಿ:

ಹಾನಗಲ್ ನೈತಿಕ ಪೊಲೀಸ್ ಗಿರಿ ಹಾಗೂ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಆರೋಪಿಗಳ ಬಂಧನ ನಡೆಯುತ್ತಿರುವ ಬೆನ್ನಲ್ಲೇ ಬ್ಯಾಡಗಿಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಘಟನೆ ನಡೆದಿದೆ‌.

ಹಿಂದೂ ವ್ಯಕ್ತಿ ಜೊತೆ ಕಾಣಿಸಿಕೊಂಡ ಮುಸ್ಲಿಂ ಯುವತಿ ರುಕ್ಸಾನಾ ಎಂಬುವವರ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದೆ. ರುಕ್ಸಾನಾ ಬ್ಯಾಡಗಿ ತಾಲೂಕು ಅಗಸನಹಳ್ಳಿ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಹೊರಟಿದ್ದರು. ತಮ್ಮ ಜೊತೆ ಕೆಲಸ ಮಾಡ್ತಿದ್ದ ಜಗದೀಶ್ ಎಂಬ ವ್ಯಕ್ತಿ ಜೊತೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಬ್ಯಾಡಗಿ ಪಟ್ಟಣದ ಪುರಸಭೆಯ ಬಳಿಯ ಶಿವನ ದೇವಸ್ಥಾನದ ಬಳಿ ಘಟನೆ ನಡೆದಿದೆ. ನೀನು ಯಾಕೆ ಇವನ ಜೊತೆ ಬೈಕ್ ನಲ್ಲಿ ಬಂದೆ? ಎಂದು ಪ್ರಶ್ನಿಸಿ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ‌.

ಅವಳನ್ನು ಎಳೆದಾಡಿ ಕಪಾಳಕ್ಕೆ ಹೊಡೆದು ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆಂದು ಮುಸ್ಲಿಂ ಮಹಿಳೆ ರುಕ್ಸಾನಾ ದೂರಿ ದಾಖಲಿಸಿದ್ದಾರೆ.

ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ 9 ಜನರ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ, 7 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್ ಖಾದರ್ ಮುದಗಲ್, ಮನ್ಸೂರ್ ತಾಂಡೂರು, ಮೆಹಬೂಬಖಾನ್ ಬಡಿಗೇರ, ರೀಯಾಜ್, ಅಲ್ಪಾಜ್ ಬಳಿಗಾರ, ಅಬ್ದುಲ್ ದೇಸೂರ, ಖಾದರ್ ಕಣಕೆ, ಸಲೀಂ ಸಾಬ್ ಖಾಜಿ,
ಮಹಬೂಬ್ ಅಲಿ ಹಲಗೇರಿ ಎಂದು ಗುರುತಿಸಲಾಗಿದೆ. ಡಿವೈಎಸ್ಪಿ ಪಾಟೀಲ ನೇತೃತ್ವದಲ್ಲಿ ತನಿಖೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!