ಟಾಲಿವುಡ್‌ನಲ್ಲಿ ಮತ್ತೊಂದು ಪ್ರೇಮ್ ಕಹಾನಿ: ಸಂದೀಪ್ ಕಿಶನ್ ಜೊತೆ ರೆಗಿನಾ ಡೇಟಿಂಗ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್‌ನಲ್ಲಿ ಈಗ ಮತ್ತೊಂದು ಪ್ರೇಮ್ ಕಹಾನಿ ಕೆಳ ಶುರುವಾಗಿದೆ. ಇತ್ತೀಚೆಗೆ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಮತ್ತೊಂದು ಜೋಡಿ ಸಜ್ಜಾಗುವ ಲಕ್ಷಣಗಳು ಕಾಣುತ್ತಿದೆ. ಇದಕ್ಕೆ ಕಾರಣ ನಟ ಸಂದೀಪ್ ಕಿಶನ್ ಮತ್ತು ರೆಗಿನಾ .

ಇತ್ತೀಚಿನ ರೆಗಿನಾ ಕುರಿತಾದ ಸಂದೀಪ್ ಕಿಶನ್ ಅವರ ಪೋಸ್ಟ್, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಇವರಿಬ್ಬರು ಪ್ರೀತಿಯಲ್ಲಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿದೆ.

ಕನ್ನಡದ `ಸೂರ್ಯಕಾಂತಿ’ ಸಿನಿಮಾ ಮೂಲಕ ಗಮನ ಸೆಳೆದ ನಟಿ ರೆಗಿನಾ ಡಿ.13ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ರೆಗಿನಾ ಜೊತೆಗಿನ ವಿಶೇಷ ಫೋಟೋ ವನ್ನು ಸಂದೀಪ್ ಕಿಶನ್ ಹಂಚಿಕೊಂಡಿದ್ದರು. ಇದೀಗ ಈ ಫೋಟೋವೇ ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದ್ದಾರೆ.

‘ಹ್ಯಾಪಿ ಬರ್ತ್‌ಡೇ ಪಾಪಾ, ನಿನ್ನನ್ನು ಪ್ರೀತಿಸುತ್ತೇನೆ, ನಿಮಗೆ ಸದಾ ಒಳ್ಳೆದಾಗಲಿ. ಯಾವಾಗಲೂ ಖುಷಿಯಾಗಿರು’ ಎಂದು ರೆಗಿನಾ ಜೊತೆಗಿನ ಸೆಲ್ಫಿಯನ್ನ ಸಂದೀಪ್ ಶೇರ್ ಮಾಡಿದ್ದಾರೆ. ಇಷ್ಟಕ್ಕೂ ಇಬ್ಬರೂ ಡೇಟ್ ಮಾಡ್ತಿರೋದು ನಿಜಾನಾ ಅಥವಾ ಸ್ನೇಹಕ್ಕೂ ಮೀರಿದ ಬಂಧ ಇದ್ಯಾ ಎಂಬುದನ್ನ ಈ ಜೋಡಿ ಅಧಿಕೃತವಾಗಿ ತಿಳಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!