ಸ್ಯಾಂಡಲ್‌ವುಡ್‌ನ ಮತ್ತೊಂದು ಮದುವೆ ಗೌಜಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿಹಾಲ್- ನಿರ್ದೇಶಕಿ ರಿಷಿಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. `ಟ್ರಂಕ್’ ಚಿತ್ರ ಖ್ಯಾತಿಯ ನಟ ನಿಹಾಲ್ (Actor Nihal) ಮತ್ತು ನಿರ್ದೇಶಕಿ ರಿಷಿಕಾ ಶರ್ಮಾ (Director Rishika Sharma) ಮದುವೆಯಾಗಿದ್ದಾರೆ.

ಅದಿತಿ ಪ್ರಭುದೇವ-ಯಶಸ್, ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್, ಹರಿಪ್ರಿಯಾ- ವಸಿಷ್ಠ ಸಿಂಹ, ಕಿಯಾರಾ-ಸಿದ್ಧಾರ್ಥ್ ಮಲ್ಹೋತ್ರಾ ಜೋಡಿ ಹೊಸ ಬಾಳಿಗೆ ಕಾಲಿಟ್ಟ ಬೆನ್ನಲ್ಲೇ ನಟ ನಿಹಾಲ್ ಮತ್ತು ರಿಷಿಕಾ ಶರ್ಮಾ ಕೂಡ ಅದ್ದೂರಿಯಾಗಿ ಮದುವೆಯಾಗಿದ್ದಾರೆ.

ಬೆಂಗಳೂರಿನ ಮಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನದಲ್ಲಿ ನಡೆದಿದೆ. ಕುಟುಂಬಸ್ಥರು ಮತ್ತು ಆಪ್ತರು ಮದುವೆಯಲ್ಲಿ ಭಾಗಿಯಾಗಿದ್ದರು. ಇನ್ನೂ ನಿಹಾಲ್ ಮತ್ತು ರಿಷಿಕಾ ಅವರದ್ದು ಪಕ್ಕಾ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ. 9 ವರ್ಷಗಳ ಪ್ರೀತಿಯನ್ನು ಕುಟುಂಬಸ್ಥರಿಗೆ (Family) ತಿಳಿಸಿ, ಹಿರಿಯರ ಒಪ್ಪಿಗೆಯ ಮೇರೆಗೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.

ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಜಿ.ವಿ ಅಯ್ಯರ್ (G.v Iyer) ಅವರ ಮೊಮ್ಮಗಳು ರಿಷಿಕಾ ಶರ್ಮಾ. ನಿರ್ದೇಶನದ ಕಡೆ ಹೆಚ್ಚಿನ ಒಲವಿದ್ದ ಕಾರಣ `ಟ್ರಂಕ್’ ಮತ್ತು `ವಿಜಯಾನಂದ’ (Vijayananda Film) ಸಿನಿಮಾವನ್ನುನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಈ ಎರಡು ಸಿನಿಮಾಗಳಿಗೆ ನಿಹಾಲ್ ನಾಯಕನಾಗಿ ಮಿಂಚಿದ್ದರು. ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಹೊಸ ಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!