ಕಾಮನ್​ ವೆಲ್ತ್ ಗೇಮ್ಸ್​​ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಅನ್ಶು ಮಲಿಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಮನ್​ ವೆಲ್ತ್ ಗೇಮ್ಸ್​​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. 21 ವರ್ಷದ ಕುಸ್ತಿಪಟು ಅನ್ಶು ಮಲಿಕ್ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನ ಗೆದ್ದರು. ಕ್ರೀಡಾಕೂಟದಲ್ಲಿ ಭಾರತದ 21ನೇ ಪದಕವಾಗಿದೆ.

ಫೈನಲ್ʼನಲ್ಲಿ ಅನ್ಶು 6-4ರಲ್ಲಿ ನೈಜೀರಿಯಾದ ಒಡುನಾಯೊ ಅಡೆಕುರೊಯೆ ವಿರುದ್ಧ ಪರಾಭವಗೊಂಡರು.

ಇದಕ್ಕೂ ಮುನ್ನ, ಅನ್ಶು ಕ್ವಾರ್ಟರ್ ಫೈನಲ್ʼನಲ್ಲಿ ಆಸ್ಟ್ರೇಲಿಯಾದ ಐರೀನ್ ಸೈಮಿಯೋನಿಡಿಸ್ ಅವರನ್ನು ಟೆಕ್ನಿಕಲ್ ಸುಪೀರಿಯರಿಟಿಯಿಂದ ಸೋಲಿಸಿದ್ದರು. ನಂತ್ರ ಸೆಮಿಫೈನಲ್ʼನಲ್ಲಿ ಶ್ರೀಲಂಕಾದ ನೆಥ್ಮಿ ಪೊರುತೋಟೇಜ್ ಅವ್ರನ್ನ ಸೋಲಿಸಿದ್ದರು.

2021ರಲ್ಲಿ ಅನ್ಶು ವಿಶ್ವ ಕುಸ್ತಿ ಚಾಂಪಿಯನ್ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 20 ವರ್ಷದ ಅನ್ಶು ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್‌ನಲ್ಲಿ ಮೂರು ಬಾರಿ ಪದಕ ಗೆದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!