ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ತೆಲುಗು ಸೂಪರ್ಸ್ಟಾರ್ ಸಮಂತಾ ಮನೆಗೆ ಹೊಸ ಅತಿಥಿಯೊಬ್ಬರು ಬಂದಿದ್ದಾರೆ.
ಹೌದು, ಸಮಂತಾ ಹೊಸ ನಾಯಿಮರಿಯೊಂದನ್ನು ಕೊಂಡಿದ್ದಾರೆ. ಅದಕ್ಕೆ ಸಾಷಾ ಎಂದು ಹೆಸರಿಟ್ಟಿದ್ದಾರೆ.
ಸಾಷಾರನ್ನು ಮನೆಗೆ ಕರೆತಂದಿದ್ದು, ಅದು ತನಗೆ ಕೊಡುತ್ತಿರುವ ಕಷ್ಟವನ್ನು ನಗುವಿನಿಂದಲೇ ಸಮಂತಾ ಹೇಳಿಕೊಂಡಿದ್ದಾರೆ.
‘ಇಂದು ಬೆಳಗ್ಗೆಯಿಂದ 19 ಸಾರಿ ಸಾಷಾ ಮೂತ್ರ ವಿಸರ್ಜನೆ ಮಾಡಿದೆ. ನನಗೆ ಒರೆಸಿ ಒರೆಸಿ ಸಾಕಾಗಿದೆ. ಈಗಿನ್ನೂ ಸಮಯ 9 ಗಂಟೆ ಅಷ್ಟೆ. ಎಲ್ಲಾ ಮುಗಿಸಿ ಉಸ್ಸಪ್ಪಾ ಎಂದು ಕೈಲಿ ಕಾಫಿ ಕಪ್ ಹಿಡಿದು ಕುಳಿತೆ. ಈಗನಿಸುತ್ತಿದೆ ಕಾಫಿಯಲ್ಲೂ ಸಕ್ಕರೆ ಕಮ್ಮಿ ಇದೆ’ ಎಂದು ಹೇಳಿ ತಮ್ಮ ಮನೆಯ ಸಾಷಾಗೆ ಹೈ ಹೇಳಿ ಎಂದಿದ್ದಾರೆ.