ಟೀಂ ಇಂಡಿಯಾದಲ್ಲಿ ಹಸಮಣೆ ಏರಲು ಸಜ್ಜಾಗುತ್ತಿದ್ದಾರೆ ಮತ್ತೊಬ್ಬ ಆಟಗಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಿನಿಮಾ ರಂಗದಂತೆ ಟೀಂ ಇಂಡಿಯಾದಲ್ಲೂ ಇದೀಗ ಮದುವೆ ಸಂಭ್ರಮ ಮನೆ ಮಾಡಿದ್ದು , ಇಬ್ಬರು ಸ್ಟಾರ್ ಕ್ರಿಕೆಟಿಗರು ಶೀಘ್ರದಲ್ಲೇ ಮದುಮಗರಾಗಲಿದ್ದಾರೆ.

ಕಳೆದ ವರ್ಷದಿಂದಲೇ ಕನ್ನಡಿಗ ಕೆಎಲ್ ರಾಹುಲ್ ಅವರ ಮದುವೆ ಬಗ್ಗೆ ಸುದ್ದಿ ಕೇಳಿಬರುತ್ತಲೇ ಇದೆ. ಇದೀಗ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ ಕೂಡ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಹುದಿನಗಳ ಗೆಳತಿ ಮೇಹಾ ಪಟೇಲ್ ಜೊತೆಗೆ ಈ ತಿಂಗಳು ಏಳು ಹೆಜ್ಜೆ ಇಡಲಿದ್ದಾರೆ. ಇದೇ ಕಾರಣಕ್ಕೆ ಬಿಸಿಸಿಐ ಅವರಿಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಿಂದ ವಿಶ್ರಾಂತಿ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ ತಂಡವನ್ನು ಪ್ರಕಟಿಸಿದಾಗ ಕೌಟುಂಬಿಕ ಕಾರಣದಿಂದ ಅಕ್ಷರ್ ಸರಣಿಗೆ ಲಭ್ಯರಿಲ್ಲ ಎಂದು ಮಂಡಳಿ ತಿಳಿಸಿತ್ತು.

ಮೇಹಾ ತಮ್ಮ ಕೈ ಮೇಲೆ ‘AKSH’ ಎಂದು ಹಚ್ಚೆ ಹಾಕಿಸಿಕೊಂಡಿದ್ದು, ಇದು ಅವರು ಅಕ್ಷರ್ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂಬ ಸೂಚಕವಾಗಿದೆ. ಪ್ರೇಯಸಿ ಮೇಹಾ ಅವರು ಡಯಟಿಷಿಯನ್ ಮತ್ತು ವೃತ್ತಿಯಲ್ಲಿ ಪೌಷ್ಟಿಕತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!