ಒಡಿಶಾದ ಹೊಟೇಲ್‌ನಲ್ಲಿ ಮತ್ತೊಬ್ಬ ರಷ್ಯನ್ ಪ್ರಜೆ ಸಾವು, ಸಾಕಷ್ಟು ಅನುಮಾನಗಳು!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ರಾಯಗಡದ ಹೊಟೇಲ್ ಒಂದರಲ್ಲಿ ರಷ್ಯಾ ಮೂಲದ ಪ್ರವಾಸಿಗರೊಬ್ಬರು ಮೃತಪಟ್ಟಿದ್ದರು, ಈ ಬೆನ್ನಲ್ಲೇ ಅದೇ ಗುಂಪಿನ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವ್ಲಾಡಿಮಿರ್ ಎಂಬ ರಷ್ಯಾ ಪ್ರಜೆ ಏಕಾಏಕಿ ಮೃತಪಟ್ಟಿದ್ದು ಅನುಮಾನಗಳು ಮೂಡಿಸಿತ್ತು. ಇದೀಗ ವ್ಲಾಡಿಮಿರ್ ಸ್ನೇಹಿತ ಪಾವೆಲ್ ಆಂಟೊನೊವ್ ಮೂರನೇ ಮಹಡಿಯಿಂದ ಬಿದ್ದಿದ್ದು, ಕೊಲೆಯೋ ಆತ್ಮಹತ್ಯೆಯೋ ತಿಳಿದುಬಂದಿಲ್ಲ.

ವ್ಲಾಡಿಮಿರ್ ಮರಣೋತ್ತರ ಪರೀಕ್ಷೆ ವೇಳೆ ಅವರು ಮೃತಪಟ್ಟಿದ್ದು ಹೃದಯಾಘಾತದಿಂದ ಎಂದು ತಿಳಿದುಬಂದಿದೆ. ವ್ಲಾಡಿಮಿರ್ ಮರಣಾನಂತರ ಪಾವೆಲ್ ಖಿನ್ನೆತೆಗೆ ಒಳಗಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಡಿ.೨೧ರಂದು ರಾಯಗಡದ ಹೊಟೇಲ್‌ನಲ್ಲಿ ತಂಗಲು ನಾಲ್ವರು ರಷ್ಯನ್ನರು ಬಂದಿದ್ದರು. ಮರುದಿನ ವ್ಲಾಡಿಮಿರ್ ಮೃತಪಟ್ಟಿದ್ದಾರೆ. ಇದಾದ ನಂತರದ ದಿನವೇ ಪಾವೆಲ್ ಕೂಡ ಮೃತಪಟ್ಟಿದ್ದಾರೆ. ಖಿನ್ನತೆಯಿಂದ ಆತ್ಮಹತ್ಯೆಗೆ ಒಳಗಾದರೋ, ಯಾರಾದರೂ ನೂಕಿದ್ದರೋ ಅಥವಾ ಕಾಲು ಜಾರಿ ಬಿದ್ದರೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!