Sunday, April 18, 2021

Latest Posts

ಆರ್ ಸಿಬಿ ತಂಡಕ್ಕೆ ಮತ್ತೊಂದು ಶಾಕ್: ಆಲ್​ ರೌಂಡರ್ ಡೇನಿಯಲ್ ಸ್ಯಾಮ್ಸ್​ಗೆ ಕೊರೋನಾ ಪಾಸಿಟಿವ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಸುರುವಾಗಲಿದ್ದು, ಇದರ ನಡುವೆ ಆಟಗಾರರಿಗೆ ಕೊರೋನಾ ಆತಂಕ ಶುರುವಾಗಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್​ ರೌಂಡರ್ ಡೇನಿಯಲ್ ಸ್ಯಾಮ್ಸ್​ಗೆ​ ಕೋವಿಡ್ ಸೋಂಕು ತಗುಲಿದೆ.
‘ಡೇನಿಯಲ್ ಸ್ಯಾಮ್ಸ್​ಗೆ​ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಅವರು ಎಲ್ಲಾ ಕೊರೋನಾ ಪ್ರೋಟೋಕಾಲ್​ಗಳನ್ನು ಅನುಸರಿಸುತ್ತಿದ್ದು, ಐಸೋಲೇಟ್ ಆಗಿದ್ದಾರೆ’ ಎಂದು ಆರ್​ಸಿಬಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಡೇನಿಯಲ್ ಸ್ಯಾಮ್ಸ್​ ತಂಡ ತಂಗಿದ್ದ ಚೆನ್ನೈನ ಹೋಟೆಲ್‌ಗೆ ಆಗಮಿಸಿದಾಗ ಮೊದಲ ಪರೀಕ್ಷೆಯ ವೇಳೆ ಕೋವಿಡ್‌ ನೆಗೆಟಿವ್​ ಬಂದಿತ್ತು. ಎರಡನೇ ಬಾರಿ ಪರೀಕ್ಷೆ ನಡೆಸಿದಾಗ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ.
ವರದಿಗಳ ಪ್ರಕಾರ, ಆರ್‌ಸಿಬಿಯ ಮೊದಲೆರಡು ಪಂದ್ಯಗಳಲ್ಲಿ ಸ್ಯಾಮ್ಸ್​ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ. ಕೊಹ್ಲಿ ನೇತೃತ್ವದ ತಂಡ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 9 ರಂದು ಮುಂಬೈ ವಿರುದ್ಧ ಆಡಲಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss