ದೆಹಲಿಯಲ್ಲಿ ಮತ್ತೊಂದು ಶಾಕಿಂಗ್ ಘಟನೆ: ಮಹಿಳಾ ಆಯೋಗದ ಅಧ್ಯಕ್ಷೆಯನ್ನೇ ಕಾರಿನಲ್ಲಿ ಎಳೆದುಕೊಂಡು ಹೋದ ಚಾಲಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಮಹಿಳಾ ಆಯೋಗದ (Delhi Commission for Women) ಅಧ್ಯಕ್ಷೆ ಸ್ವಾತಿ ಮಲಿವಾಲ್‌ (Swati Maliwal) ಅವರನ್ನು ಏಮ್ಸ್‌ನ ಹೊರಗಿನ ರಸ್ತೆಯಲ್ಲಿ ಎಳೆದುಕೊಂಡು ಹೋದ ಆಘಾತಕಾರಿ ಘಟನೆ ನಡೆದಿದೆ.

ಈ ಕುರಿ ತುವಿಡಿಯೋ ಇದೀಗ ಹರಿದಾಡುತ್ತಿದ್ದು,ಸುಮಾರು 10ರಿಂದ 15 ಮೀಟರ್ ಎಳೆದುಕೊಂಡು ಹೋಗಿದ್ದಾರೆ.

ಕುಡಿದಿದ್ದ ಚಾಲಕನ ಜೊತೆ ಮುಂಜಾನೆ 3 ಗಂಟೆ ಸುಮಾರಿಗೆ ಸ್ವಾತಿ ಮಲಿವಾಲ್ ಮಾತನಾಡುತ್ತಿದ್ದಾಗ ಆತ ಕಾರಿನ ಕಿಟಕಿ ತೆರೆದಿದ್ದ. ಆಗ ಸ್ವಾತಿ ಅವರ ಕೈ ಕಿಟಕಿಯಲ್ಲಿ ಸಿಲುಕಿಕೊಂಡಿತ್ತು. ತನ್ನ ಕಾರಿನಲ್ಲಿ ಕುಳಿತುಕೊಳ್ಳುವಂತೆ ಸ್ವಾತಿ ಅವರ ಜೊತೆ ಅಸಭ್ಯವಾಗಿ ವರ್ತಿಸಿ ಕಾರು ಚಲಾಯಿಸಿಕೊಂಡು ಹೋಗಿದ್ದ. ಈ ವೇಳೆ ಕೈ ಸಿಕ್ಕಿಹಾಕಿಕೊಂಡಿದ್ದರಿಂದ ಸ್ವಾತಿ ಅವರನ್ನು ಕಾರು ಎಳೆದುಕೊಂಡು ಹೋಗಿತ್ತು.
ಸಂಗಮ್ ವಿಹಾರ್ ನಿವಾಸಿಯಾದ 47 ವರ್ಷದ ಹರೀಶ್ ಚಂದ್ರ ಎಂಬ ವ್ಯಕ್ತಿಯನ್ನು ಕಿರುಕುಳ ಮತ್ತು ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

ಸ್ವಾತಿ ಮಲಿವಾಲ್ ಮಹಿಳಾ ಸುರಕ್ಷತೆ ಬಗ್ಗೆ ರಾತ್ರಿ ಪರಿಶೀಲನೆ ಮಾಡಲು ನಿಂತಿದ್ದಾಗ ಕಾರಿನಲ್ಲಿ ಬಂದ ವ್ಯಕ್ತಿ ಆಕೆಗೆ ಲಿಫ್ಟ್ ಕೊಡುವುದಾಗಿ ಹೇಳಿದ್ದ. ಆಗ ತನ್ನನ್ನು ಎಲ್ಲಿ ಬಿಡುತ್ತೀರಾ? ಈಗಾಗಲೇ ರಾತ್ರಿಯಾಗಿದೆ ಎಂದು ಸ್ವಾತಿ ಮಾತನಾಡುತ್ತಿದ್ದಾಗ ಆತ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಈ ಘಟನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮಹಿಳಾ ಆಯೋಗದ ಅಧ್ಯಕ್ಷೆಗೇ ಹೀಗಾದರೆ ಉಳಿದ ಮಹಿಳೆಯರ ಕತೆಯೇನು? ಎಂಬ ಪ್ರಶ್ನೆಯೂ ಉದ್ಭವವಾಗಿತ್ತು. ಇದೀಗ ಈ ಘಟನೆಯ ಸಿಸಿಟಿವಿ ವಿಡಿಯೋ ಎಲ್ಲ ಕಡೆ ಹರಿದಾಡುತ್ತಿದೆ.

 

ಈ ಘಟನೆ ಕುರಿತು ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಕಳೆದ ರಾತ್ರಿ, ನಾನು ದೆಹಲಿಯಲ್ಲಿ ಮಹಿಳಾ ಸುರಕ್ಷತೆಯ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೆ. ಆಗ ಕುಡಿದ ಅಮಲಿನಲ್ಲಿ ಕಾರ್ ಡ್ರೈವರ್ ನನಗೆ ಕಿರುಕುಳ ನೀಡಿದ್ದಾನೆ. ನಾನು ಅವನನ್ನು ಹಿಡಿದಾಗ ಅವನು ನನ್ನ ಕೈಯನ್ನು ಕಿಟಕಿಯಲ್ಲಿ ಸಿಲುಕಿಸಿಕೊಂಡು ನನ್ನನ್ನು ಎಳೆದುಕೊಂಡು ಹೋದನು. ಸದ್ಯ ದೇವರು ನನ್ನ ಜೀವ ಉಳಿಸಿದ. ಇಲ್ಲದಿದ್ದರೆ ಅಂಜಲಿ ಸಿಂಗ್​ಗೆ ಆದ ಸ್ಥಿತಿಯೇ ನನಗೂ ಆಗುತ್ತಿತ್ತೇನೋ. ಮಹಿಳಾ ಆಯೋಗದ ಅಧ್ಯಕ್ಷರು ದೆಹಲಿಯಲ್ಲಿ ಸುರಕ್ಷಿತವಾಗಿಲ್ಲದಿದ್ದರೆ ಉಳಿದವರ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಬಹುದು ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!