ಅಭಿಮಾನಿಗಳಿಗೆ ಮತ್ತೊಂದು ಸರ್​ಪ್ರೈಸ್​ ನೀಡಿದ ‘ಕೆಜಿಎಫ್: ಚಾಪ್ಟರ್ 2: ಎಮೋಷನಲ್​ ಸಾಂಗ್ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್

ಇಡೀ ವಿಶ್ವವೇ ಕಾತುರದಿಂದ ಕಾದು ಕುಳುತ್ತಿರುವ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್: ಚಾಪ್ಟರ್ 2’. ಈಗಾಗಲೇ ಟ್ರೈಲರ್ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ.ನ್ನೇನು ಕೆಲವೇ ದಿನಗಳಲ್ಲಿ ಕೆಜಿಎಫ್​​ ಚಾಪ್ಟರ್​-2 ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು,ಇದೀಗ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಸರ್​ಪ್ರೈಸ್​ ನೀಡಿದೆ.
ಕೆಜಿಎಫ್​ ಚಿತ್ರತಂಡ ಹೊಸ ಹಾಡೊಂದನ್ನ ಬಿಡುಗಡೆ ಮಾಡಿದೆ. ‘ಗಗನ ನೀ..’ ಎಂಬ ಹಾಡನ್ನ ಬಿಡುಗಡೆ ಮಾಡಿದೆ. ಈ ಹಾಡಿಗೆ ಕಿನ್ನಲ್​ ರಾಜ್​ ಸಾಹಿತ್ಯ ಬರೆದಿದ್ದು, ಸುಚೇತಾ ಬಸ್ರೂರು ಅವರ ಕಂಠದಲ್ಲಿ ಈ ಎಮೋಷನಲ್​ ಗೀತೆ ಮೂಡಿಬಂದಿದೆ.
ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ವರ್ಷನ್​ಗಳಲ್ಲಿ ಸಾಂಗ್​ ರಿಲೀಸ್​ ಆಗಿದೆ. ನಟಿ ಅರ್ಚನಾ ಜೋಯಿಸ್​ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ರಾಕಿ ಬಾಯಿ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​ ಯಶ್​, ಶ್ರೀನಿಧಿ ಶೆಟ್ಟಿ, ಸಂಜಯ್​ ದತ್​, ರವೀನಾ ಟಂಡನ್​, ವಸಿಷ್ಠ ಸಿಂಹ, ಪ್ರಕಾಶ್​ ರಾಜ್​, ಸೇರಿದಂತೆ ಹಲವು ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!