ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಮತ್ತೊಮ್ಮೆ ಕಲ್ಲು ತೂರಾಟ: ರೈಲಿನ ಗಾಜು ಪೀಸ್‌ ಪೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ದಾಳಿಗಳು ಆಗಾಗ ನಡೆಯುತ್ತಲೇ ಇವೆ. ಇದೀಗ ಸಿಕಂದರಾಬಾದ್-ವಿಶಾಖ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮತ್ತೊಮ್ಮೆ ಕಲ್ಲು ತೂರಾಟ ನಡೆದಿದೆ. ಮಹಬೂಬಾಬಾದ್-ಗಾರ್ಲಾ ರೈಲು ನಿಲ್ದಾಣಗಳ ನಡುವೆ ಶುಕ್ರವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ನಾಲ್ಕನೇ ಸಂಖ್ಯೆಯ ಕೋಚ್‌ನ ಗಾಜು ಒಡೆದು ಚೂರಾಗಿದೆ.

ಕೋಚ್‌ನ ಕನ್ನಡಿಗಳು ಒಡೆದು ಹೋಗಿದ್ದು, ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಪಡೆದ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಜನವರಿ 3 ರಂದು ಖಮ್ಮಂ ಜಿಲ್ಲೆಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಮೂವರು ಯುವಕರನ್ನು ಪೊಲೀಸರು ಗುರುತಿಸಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊನ್ನೆ ಜನವರಿಯಲ್ಲಿ ರೈಲು ಆರಂಭಕ್ಕೂ ಮುನ್ನ ವಂದೇ ಭಾರತ್ ರೈಲಿನ ಮೇಲೆ ದಾಳಿ ನಡೆದಿದ್ದು ಗೊತ್ತೇ ಇದೆ. ಪ್ರಾಯೋಗಿಕ ಸಂಚಾರದ ಅಂಗವಾಗಿ ವಿಶಾಖಕ್ಕೆ ಬಂದಿದ್ದ ವಂದೇ ಭಾರತ್ ರೈಲು ಬೋಗಿಗಳ ಮೇಲೆ ಕಂಚರಪಾಲೆಂನಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ಕಲ್ಲು ತೂರಾಟದಲ್ಲಿ ಎರಡು ಬೋಗಿಗಳ ಗಾಜುಗಳು ಧ್ವಂಸಗೊಂಡಿವೆ. ರಾಮಮೂರ್ತಿ ಪಂತುಲು ಪೇಟೆ ಗೇಟ್‌ನಲ್ಲಿ ಆಟವಾಡುತ್ತಿದ್ದ ಪುಂಡ ಪೋಕರಿಗಳು ರೈಲಿಗೆ ಕಲ್ಲು ತೂರಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ನಂತರ ಅವರನ್ನು ಬಂಧಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!