ಯುರೇಕಾ ಯುರೇಕಾ… ಬಾಹ್ಯಾಕಾಶದಲ್ಲಿ ಪತ್ತೆಯಾಗಿದೆ ಇನ್ನೊಂದು ಸೂಪರ್ ಅರ್ಥ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖಗೋಳ ಶಾಸ್ತ್ರಜ್ಞರು ರಾಸ್ 508ಬಿ ಹೆಸರಿನ ಸೂಪರ್ ಅರ್ಥ್ ಪತ್ತೆ ಹಚ್ಚಿದ್ದಾರೆ. ಇದು ಭೂಮಿಯಿಂದ 37 ಬೆಳಕಿನ ವರ್ಷಗಳಷ್ಟು ದೂರದಲ್ಲಿ, ಕೆಂಪು ಕುಬ್ಜ ನಕ್ಷತ್ರದ ವಾಸಯೋಗ್ಯ ವಲಯದಲ್ಲಿದೆ. ಹವಾಯಿಯ ಸುಬಾರು ಸ್ಟ್ರಾಟೆಜಿಕ್ ಪ್ರೋಗ್ರಾಂನ ಖಗೋಳ ಶಾಸ್ತ್ರಜ್ಞರು ಇದನ್ನು ಪತ್ತೆಹಚ್ಚಿದ್ದಾರೆ.

ಈ ಸೂಪರ್ ಅರ್ಥ್ ಭೂಮಿಗಿಂದ ಸುಮಾರು ನಾಲ್ಕು ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಹೊಂದಿದೆ. ರಾಸ್ 508ಬಿ ಕೆಂಪು ಕುಬ್ಜ ನಕ್ಷತ್ರದ ಸುತ್ತ ತನ್ನ ಕಕ್ಷೆಯಲ್ಲಿ ವಾಸಯೋಗ್ಯ ವಲಯದ ಮೂಲಕ ಹಾದು ಹೋಗುತ್ತದೆ. ಈ ಗ್ರಹವು ದೀರ್ಘವೃತ್ತದ ಕಕ್ಷೆಯನ್ನು ಹೊಂದಿದ್ದು, ಇದರ ಕಕ್ಷೆಯ ಅವಧಿ ಕೇವಲ 10.8 ದಿನಗಳು ಎಂದು ನಾಸಾದ ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

ಆದರೆ ಈ ಗ್ರಹವು ತನ್ನ ನಕ್ಷತ್ರದ ವಾಸಯೋಗ್ಯ ವಲಯದ ಒಳಗೆ ಮತ್ತು ಹೊರಗೆ ಸುತ್ತುತ್ತಿರುತ್ತದೆ. ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ತನ್ನ ಕಾರ್ಯಾಚರಣೆ ಆರಂಭಿಸಿದಾಗ ಇದು ನಿರ್ಣಾಯಕ ಶೋಧವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!