Wednesday, June 29, 2022

Latest Posts

ಹನಿಟ್ರ್ಯಾಪ್​ ಜಾಲಕ್ಕೆ ಮತ್ತೊಬ್ಬ ಟೆಕ್ಕಿ ಬಲಿಪಶು: ಪ್ರೀತಿ ಹೆಸರಿನಲ್ಲಿ ಕಳೆದುಕೊಂಡ ಹಣ, ಕಾರು!

ಹೊಸದಿಗಂತ ಆನ್ ಲೈನ್ ಡೆಸ್ಕ್

ಬೆಂಗಳೂರಿನಲ್ಲಿ ಹನಿಟ್ರ್ಯಾಪ್​ ಜಾಲಕ್ಕೆ ಮತ್ತೊಬ್ಬ ಟೆಕ್ಕಿ ಬಲಿಪಶು ಆಗಿದ್ದಾರೆ. ಯುವತಿಯ ಹಿಂದೆ ಹೋಗಿ ಟೆಕ್ಕಿ ಕಾರು, ಮೊಬೈಲ್​ ಹಾಗೂ ಹಣವನ್ನು ಕಳೆದುಕೊಂಡಿದ್ದಾರೆ.
ಬೆಂಗಳೂರಿನ ಗಾರೆಪಾಳ್ಯ ನಿವಾಸಿಯಾಗಿದ್ದ ಟೆಕ್ಕಿ ತರಕಾರಿ ತರಲು ಸೂಪರ್​ ಮಾರ್ಕೆಟ್​ಗೆ ತೆರಳಿದ್ದರು. ಈ ವೇಳೆ ಯುವತಿಯೊಂದಿಗೆ ಟೆಕ್ಕಿಗೆ ಪರಿಚಯವಾಗಿತ್ತು. ಈ ಪರಿಚಯ ಸ್ನೇಹಕ್ಕೂ ತಿರುಗಿತ್ತು. ಯುವತಿಯೊಂದಿಗೆ ಅತ್ಯಂತ ಸಲುಗೆಯಿಂದ ಇದ್ದ ಟೆಕ್ಕಿ ವೀಕೆಂಡ್​ಗಳಲ್ಲಿ ಹೋಟೆಲ್​ ಹಾಗೂ ರೆಸ್ಟಾರೆಂಟ್​ಗಳಿಗೆ ತೆರಳುತ್ತಿದ್ದರು.
ತನ್ನ ಕುಟುಂಬಸ್ಥರನ್ನು ಪರಿಚಯ ಮಾಡಿಸುತ್ತೇನೆಂದು ಯುವತಿಯು ಟೆಕ್ಕಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಯುವತಿಯ ಮಾತನ್ನು ನಂಬಿ ಆಕೆಯ ಮನೆಗೆ ತೆರಳಿದ್ದ ಟೆಕ್ಕಿ ರೂಮ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಕೂಡಲೇ ಆತನಿದ್ದ ಕೋಣೆಗೆ ನುಗ್ಗಿದ ಇತರೆ ಆರೋಪಿಗಳು 10 ಲಕ್ಷ ರೂಪಾಯಿ ನೀಡುವಂತೆ ಧಮ್ಕಿ ಹಾಕಿದ್ದಾರೆ.
ಹಣ ನೀಡದೇ ಇದ್ದಲ್ಲಿ ಖಾಸಗಿ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇದಕ್ಕೆ ಟೆಕ್ಕಿ ಒಪ್ಪದ ಹಿನ್ನೆಲೆಯಲ್ಲಿ ಅವರ ಬಳಿ ಇದ್ದ ಐಷಾರಾಮಿ ಕಾರು, 37 ಸಾವಿರ ರೂಪಾಯಿ ಹಣ ಹಾಗೂ ಐಫೋನ್​ ಕಿತ್ತು ಪರಾರಿಯಾಗಿದ್ದಾರೆ.
ಈ ಸಂಬಂಧ ಮೈಕೋ ಲೇಔಟ್​ ಠಾಣೆಯಲ್ಲಿ ಟೆಕ್ಕಿ ಪ್ರಕರಣ ದಾಖಲಿಸಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss