ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ 34 ವರ್ಷದ ರೈತನೊಬ್ಬ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಾಳದೆ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ.
ನೇಣು ಬಿಗಿದುಕೊಂಡು ಯುವ ರೈತ ಸಂಜಯ್ (34) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿ ಮಾಡಲು ಇತ್ತೀಚಿಗೆ ಎರಡು ಬೋರ್ವೆಲ್ ಗಳನ್ನು ಕೊರೆಸಿದ್ದರು. ಬೋರ್ವೆಲ್ ಕೊರಿಸಲು ಫೈನಾನ್ಸ್ ನಲ್ಲಿ ಒಂದು ಲಕ್ಷ ಸಾಲವನ್ನು ಪಡೆದಿದ್ದರು. ಕೊಡಿಸಿದ್ದ ಎರಡೂ ಬೋರ್ವೆಲ್ ಗಳಲ್ಲಿ ನೀರು ಬಿದ್ದಿರಲಿಲ್ಲ.ಸೊಸೈಟಿ ಸೇರಿದಂತೆ ವಿವಿಧಡೆ 10 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಆದರೆ ಸಾಲ ತೀರಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದರು ಇದರಿಂದ ಮನನೊಂದ ರೈತ ಸಂಜಯ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆ ಕುರಿತು ಮಳವಳ್ಳಿ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.