ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾದಿಂದ ವಿಶ್ವ ಚೇತರಿಕೆ ಆಗುತ್ತಿರುವಾಗ ಮತ್ತೊಂದು ಭಯಾನಕ ಸೋಂಕು ಎಂಟ್ರಿ ಕೊಟ್ಟಿರುವ ಸೂಚನೆ ಸಿಕ್ಕಿದ್ದು, ಬ್ರಿಟನ್ನಲ್ಲಿ ಒಂದೇ ಕುಟುಂಬದ ಇಬ್ಬರಲ್ಲಿ ಮಂಕಿಪಾಕ್ಸ್ ದೃಢವಾಗಿದೆ.
ಬ್ರಿಟನ್ನ ನಾರ್ತ್ ವೇಲ್ಸ್ನ ಕುಟುಂಬವೊಂದರ ಇಬ್ಬರು ಸದಸ್ಯರಲ್ಲಿ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿದ್ದು, ಅವರಿಬ್ಬರೂ ಬೇರೆ ದೇಶದಿಂದ ಬಂದಿರುವುದಾಗಿ ಬ್ರಿಟನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಆದರೆ ಈ ಸೋಂಕು ಮನುಷ್ಯರಿಂದ ಮುನಷ್ಯರಿಗೆ ಹರಡುವ ಸಾಧ್ಯತೆ ಅತ್ಯಂತ ಕಡಿಮೆಯಿದೆ ಎಂದು ತಿಳಿಸಲಾಗಿದೆ.
ಮಂಕಿಪಾಕ್ಸ್ ಗುಣಲಕ್ಷಣಗಳು ಸಿಡುಬಿನ ರೀತಿಯ ಗುಣಲಕ್ಷಣಗಳನ್ನೇ ಹೊಂದಿದೆ. ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಪ್ರಾಣಿಯ ಸಂಪರ್ಕಕ್ಕೆ ಬರುವ ಮನುಷ್ಯರಿಗೂ ಹಬ್ಬುತ್ತದೆ. ಸಾಮಾನ್ಯವಾಗಿ ಆಫ್ರಿಕಾ ದೇಶದಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.
ಈ ಸೋಂಕು ಬರುವವರಿಗೆ ಮೊದಲು ಚರ್ಮದಲ್ಲಿ ಅಲರ್ಜಿ ಕಾಣಿಸಿಕೊಳ್ಳುತ್ತದೆ. ನಂತರ ತಂಡಿ, ಜ್ವರ, ಮೈ ಕೈ ನೋವು, ತಲೆ ನೋವು ಕಾಣಿಸಿಕೊಳ್ಳುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮಂಕಿಪಾಕ್ಸ್ ಮರಣ ಪ್ರಮಾಣ ಶೇ. 11ರಷ್ಟಿದೆ. ಸಿಡುಬಿಗೆ ನೀಡುವ ಲಸಿಕೆಯೇ ಈ ಸೋಂಕಿಗೂ ಪರಿಣಾಮಕಾರಿ ಎನ್ನಲಾಗಿದೆ.