ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವು ಕಚ್ಚಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ವಿಟ್ಲ ಮಂಗಿಲಪದವು ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ಪೆರುವಾಯಿ ನಿವಾಸಿ ಸುರೇಶ್ ನಾಯ್ಕ ಎಂದು ಗುರುತಿಸಲಾಗಿದೆ. ಸುರೇಶ್ ನಾಯ್ಕ ಪುತ್ತೂರಿನ ಮಂಗಿಲ ಪದವು ಬಳಿ ಇರುವ ನವಗ್ರಾಮ ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದರು.
ಪಕ್ಕದ ಮನೆಯ ಅಬ್ಬು ಎಂಬವರು ಮನೆಯಲ್ಲಿ ಹಾವು ಬಂದಿದೆ ಎಂದು ಯಾರೋ ಬೊಬ್ಬೆ ಹಾಕಿದಾಗ ಸುರೇಶ್ ಹಾವು ನೋಡಲು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.