ಜೆಡಿಎಸ್ ಸಮಾವೇಶದಲ್ಲಿ ಅಪ್ಪನ ಸ್ಥಿತಿ ಕಂಡು ಕಣ್ಣೀರು ಹಾಕಿದ ಅಣ್ತಮ್ಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ವ್ಯಾಪ್ತಿಯ ಸೋಮನಹಳ್ಳ ಅಮ್ಮನವರ ದೇಗುಲ ಆವರಣದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಹೆಚ್​ಡಿಕೆ ಭಾಷಣ ವೇಳೆ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.

ಇದೆ ವೇಳೆ ಸೋದರನ ಕಣ್ಣಲ್ಲಿ ನೀರು ಕಂಡು ಹೆಚ್ ಡಿ ರೇವಣ್ಣ ಅವರು ಸಹ ವೇದಿಕೆಯಲ್ಲಿ ಕಣ್ಣೀರು ಹಾಕಿದರು.
ಭಾಷಣ ಮುಗಿಸಿ ಟವೆಲ್ ಹಿಡಿದುಕೊಂಡು ಬಂದು ಅಳುತ್ತಾ ಕುಳಿತ ಹೆಚ್ ಡಿಕೆಯನ್ನು ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಸಮಾಧಾನಪಡಿಸಿದರು.

ಮನೆಯಲ್ಲಿ ವಯೋಸಹಜ ಶಕ್ತಿಹೀನತೆಯಿಂದ ಕುಳಿತಿರುವ ಹೆಚ್ ಡಿ ದೇವೇಗೌಡರು ಮನೆಯಲ್ಲಿ ಕುಳಿತಿರುವ ದೃಶ್ಯವನ್ನು ತೋರಿಸಲಾಯಿತು.

ಆಗ ಕಣ್ಣೀರು ಹಾಕುತ್ತಾ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಸಾಲಮನ್ನಾದಿಂದ ರೈತರಿಗೆ ಬದುಕು ಶಾಶ್ವತವಾಗಿ ಸಿಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸಿ 5 ವರ್ಷ ನನಗೆ ಆಡಳಿತ ಕೊಟ್ಟರೆ ರೈತರು ಸಾಲಗಾರರಾಗದಿರುವಂತಹ ರೀತಿಯಲ್ಲಿ ನಾನು ಮಾಡುತ್ತೇನೆ. ರಾಜ್ಯಕ್ಕೆ ಯಾವ ರೀತಿ ಯೋಜನೆಗಳನ್ನು ಕೊಡುತ್ತೇನೆ ಎಂದು ಮನೆಮನೆಗೆ ಪ್ರಣಾಳಿಕೆ ಕಳುಹಿಸುತ್ತೇನೆ ಎಂದು ಘೋಷಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!