Saturday, June 25, 2022

Latest Posts

ತಾಲಿಬಾನ್ ವಿರುದ್ಧ ಪೋಸ್ಟ್: ಮುಸ್ಲಿಂ ಲೀಗ್ ಶಾಸಕ ಎಂ.ಕೆ.ಮುನೀರ್‌ಗೆ ಎರಡು ಬೆದರಿಕೆ ಪತ್ರ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಫ್ಘಾನಿಸ್ತಾನದ ಕ್ರೌರ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಮುಸ್ಲಿಂ ಲೀಗ್ ಶಾಸಕ ಎಂ.ಕೆ. ಮುನೀರ್‌ಗೆ ಎರಡು ಬೆದರಿಕೆ ಪತ್ರ ಬಂದಿದೆ.
ತಾಲಿಬಾನ್-ಒಂದು ವಿಸ್ಮಯ ಎಂಬ ಹೆಸರಿನಲ್ಲಿ ಪತ್ರ ತಲುಪಿದೆ. ಬೆದರಿಕೆ ಪತ್ರದಲ್ಲಿ ‘ಸಾಮಾಜಿಕ ಜಾಲತಾಣದಲ್ಲಿ ಇರುವ ಪೋಸ್ಟ್‌ನ್ನು ಡಿಲೀಟ್ ಮಾಡಲು 24 ಗಂಟೆಗಳ ಗಡುವು ನೀಡಲಾಗಿದೆ. ಈ ಸಮಯದಲ್ಲಿ ಪೋಸ್ಟ್ ಡಿಲೀಟ್ ಆಗದಿದ್ದರೆ ನಿಮ್ಮನ್ನೂ ನಿಮ್ಮ ಕುಟುಂಬವನ್ನು ಹುಡುಕಿ ಕೊಲ್ಲುತ್ತೇವೆ’ ಎಂದು ಹೆದರಿಸಿದ್ದಾರೆ. ಕೋಯಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿಯ ಪ್ರದೇಶದಿಂದ ಈ ಪೋಸ್ಟ್ ಮಾಡಲಾಗಿದೆ.
ಜೊತೆಗೆ ‘2010 ರಲ್ಲಿ ಧರ್ಮನಿಂದನೆ ಮಾಡಿದ ಪ್ರೊ.ಟಿ.ಕೆ.ಜೋಸೆಫ್ ಕೈ ಕತ್ತರಿಸಲಾಗಿತ್ತು. ಅದೇ ಸ್ಥಿತಿ ನಿಮಗೂ ಬರಲಿದೆ’ ಎಂದು ಹೇಳಿದ್ದಾರೆ. ‘ಬೆಳಗ್ಗೆ ಮನೆಗೆ ಒಂದು ಪತ್ರ, ಸಂಜೆ ಆಫೀಸಿಗೆ ಒಂದು ಪತ್ರ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ. ಪೋಸ್ಟ್ ಡಿಲೀಟ್ ಮಾಡುವುದಿಲ್ಲ’ ಎಂದು ಮುನೀರ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss