ಹೊಸದಿಗಂತ ಆನ್ ಲೈನ್ ಡೆಸ್ಕ್:
ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ಫ್ಲಾರಿಡಾ ಮೂಲದ ಹಿಂದೂ ಯೂನಿವರ್ಸಿಟಿ ಆಫ್ ಅಮೆರಿಕ ಗೌರವ ಡಾಕ್ಟರೇಟ್ ನೀಡಿದೆ.
ಅನುಪಮ್ ಖೇರ್ ಅವರು ಹಿಂದೂ ಧರ್ಮದ ಬಗ್ಗೆ ನಡೆಸಿದ ಅಧ್ಯಯನವನ್ನು ಪರಿಗಣಿಸಿ ಈ ಗೌರವ ಡಾಕ್ಟರೇಟ್ ನೀಡಲಾಗಿದೆ.
ಅಮೆರಿಕದ ಹಿಂದೂ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದ ಮೊದಲ ಗೌರವ ಇದಾಗಿದೆ. ಹಿಂದೂ ಧರ್ಮದ ಮೂಲಕ, ನಾವು ಸಾಮರಸ್ಯದ ಮಹತ್ವವನ್ನು ಕಲಿಯಬಹುದು. ಡಾಕ್ಟರೇಟ್ನೊಂದಿಗೆ ಹಿಂದೂ ಧರ್ಮದ ತತ್ವಜ್ಞಾನದ ಕುರಿತು ಪ್ರಚಾರ ಮಾಡಲು ಈ ಪದವಿ ವೇದಿಕೆ ಕಲ್ಪಿಸಿಕೊಡಲಿದೆ ಎಂದು ಹೇಳಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿದ ಅವರು, ನನ್ನ ಜೀವನದ ಪ್ರಮುಖ ಸಾಧನೆಗಳಲ್ಲಿ ಈ ಪದವಿಗೆ ಅತ್ಯಂತ ಎತ್ತರದ ಸ್ಥಾನವಿದೆ. ಈ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದಕ್ಕೆ ನನಗೆ ಸಂತಸವಾಗಿದೆ. ಈ ಗೌರವಕ್ಕಾಗಿ ಹಿಂದೂ ಯೂನಿವರ್ಸಿಟಿ ಆಫ್ ಅಮೆರಿಕದ ಆಡಳಿತ ಮಂಡಳಿಗೆ ಎಷ್ಟು ಧನ್ಯವಾದ ತಿಳಿಸಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
Getting a honorary doctorate in #PhilosophyOfHinduStudies from the prestigious #HinduUniversityOfAmerica will always be one of the major highlights of my life. Can’t thank enough the board of trustees of #HUA for this honour. Jai Bharat! 🙏🕉🇮🇳 #DoctorKher #Humbled @StudyAtHUA pic.twitter.com/qTgYZZI3II
— Anupam Kher (@AnupamPKher) September 19, 2021