ಪ್ರಧಾನಿ ಮೋದಿ ಡಿಗ್ರಿ ಪ್ರಶ್ನೆ ಮಾಡಿದವರಿಗೆ ಕ್ಲಾಸ್ ತೆಗೆದುಕೊಂಡ ಅನುಪಮ್‌ ಖೇರ್‌ ತಾಯಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಅವರ ಪದವಿಯ ಕುರಿತು ಪ್ರಶ್ನೆ ಮಾಡಿದ್ದ ವಿಪಕ್ಷ ನಾಯಕರಿಗೆ ಬಾಲಿವುಡ್‌ನ ಹಿರಿಯ ನಟ ಅನುಪಮ್‌ ಖೇರ್‌ ಅವರ ತಾಯಿ ದುಲ್ಹಾರಿ ಖೇರ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಮೋದಿ ಶಿಕ್ಷಿತನಲ್ಲ ಎಂದು ಕೆಲವರು ಹೇಳುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ, ‘ಹಾಗಿದ್ದರೆ ನೀನು ಹೋಗಿ ಅವರಿಗೆ ಕಲಿಸು. ನಿನ್ನಂಥ 10 ಜನ್ರಿಗೆ ಬುದ್ಧಿ ಕಲಿಸ್ತಾನೆ ಮೋದಿ. ಅವರು ಎಷ್ಟೆಲ್ಲಾ ಕೆಲಸ ಮಾಡ್ತಿದ್ದಾರೆ. ಸುಖಾಸುಮ್ಮನೆ ಕೆಲಸ ಇಲ್ಲದೆ ಕುಳಿತವರೆಲ್ಲ, ಮೋದಿಗೆ ಹೆಚ್ಚು ಕಲಿತವನಲ್ಲ ಎನ್ನುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಿಗೂ ಬುದ್ಧಿಯೇ ಇಲ್ಲ, ಆದ್ದರಿಂದ ಅಧ್ಯಯನಕ್ಕಿಂತ ಬುದ್ದಿ ಹೆಚ್ಚು ಮುಖ್ಯ’ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಅನುಪಮ್‌ ಖೇರ್‌ ಅವರ ತಾಯಿಯ ರಿಯಾಕ್ಷನ್‌ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ.

ಸಾಮಾನ್ಯವಾಗಿ ಅನುಪಮ್‌ ಖೇರ್‌ ತಮ್ಮ ತಾಯಿಯ ತಮಾಷೆಯ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡತ್ತಲೇ ಇರುತ್ತಾರೆ. ತಾಯಿಗೆ ಪ್ರಸ್ತುತ ಚರ್ಚೆಯಲ್ಲಿರುವ ಕೆಲವೊಂದು ವಿಚಾರಗಳ ಬಗ್ಗೆ ಪ್ರಶ್ನೆ ಮಾಡಿ ಅವರ ಮುಕ್ತ ಅಭಿಪ್ರಾಯವನ್ನು ಶೇರ್‌ ಮಾಡಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಡಿಗ್ರಿ ಬಗ್ಗೆ ಇತ್ತೀಚೆಗೆ ಬಹಳ ಚರ್ಚೆ ಕುರಿತು ತಾಯಿ ದುಲ್ಹಾರಿ ಅವರಿಗೆ ರಾಜ್‌ ಖೇರ್‌ (ಸಹೋದರ) ಪ್ರಶ್ನೆ ಕೇಳಿದ್ದರು.

ಅನುಪಮ್ ಖೇರ್ ಅವರಂತೆ ಅವರ ತಾಯಿ ದುಲಾರಿ ಕೂಡ ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಸಾಮಾಜಿಕ ಮೀಡಿಯಾದಲ್ಲಿ ಅವರ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಕಳೆದ ವರ್ಷ ಜನವರಿ 26 ರಂದು, ಅನುಪಮ್ ಖೇರ್ ಅವರು ಗಣರಾಜ್ಯೋತ್ಸವದ ಪರೇಡ್ ವೀಕ್ಷಿಸಿದ ನಂತರ ಅವರ ತಾಯಿ ದುಲ್ಹಾರಿಗೆ ಮೋದಿಯನ್ನು ಆಶೀರ್ವದಿಸಿದ ವೀಡಿಯೊವನ್ನು ಹಂಚಿಕೊಂಡರು ಮತ್ತು ಅವರು ಮತ್ತೆ ಗೆಲ್ಲುತ್ತಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಒಮ್ಮೆ ಅನುಪಮ್ ಖೇರ್ ಅವರ ತಾಯಿ ದುಲಾರಿ ಅವರು ಪ್ರಧಾನಿ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ, ಮೋದಿ ಅವರಿಗೂ ಧನ್ಯವಾದ ಸಲ್ಲಿಸಿದ್ದರು.

ಇನ್ನು ಪ್ರಧಾನಿ ಮೋದಿ ಅವರ ಡಿಗ್ರಿ ಸರ್ಟಿಫಿಕೇಟ್‌ಅನ್ನು ನೀಡೋಕೆ ಸಾಧ್ಯವಿಲ್ಲ ಎಂದು ಗುಜರಾತ್‌ ಹೈಕೋರ್ಟ್‌ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಹೇಳಿದ್ದಲ್ಲದೆ, 25 ಸಾವಿರ ರೂಪಾಯಿ ದಂಡವನ್ನೂ ವಿಧಿಸಿತ್ತು. ಅದರ ಬೆನ್ನಲ್ಲಿಯೇ ಪ್ರಧಾನಿ ಮೋದಿಯ ಡಿಗ್ರಿ ಕುರಿತಾಗಿ ಮತ್ತಷ್ಟು ಚರ್ಚೆಗಳು ಆರಂಭವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!