ಹೊಸದಿಗಂತ ಡಿಜಿಟಲ್ ಡೆಸ್ಕ್:
2023ರ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲಿನ ನಂತರ ಅನುಷ್ಕಾ ಶರ್ಮಾ ತನ್ನ ಪತಿ ವಿರಾಟ್ ಕೊಹ್ಲಿಗೆ ಸಂತೈಸಿದ ಚತ್ರವೊಂದು ನೋಡುಗರ ಮನಮುಟ್ಟುವಂತಿದೆ. ವಿಶ್ವ ಟೂರ್ನಿಯಲ್ಲಿ ಭಾರತ ತಂಡ ಎಲ್ಲಾ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರೂ, ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ಭಾರತ ತಂಡ ಸೋತಿತ್ತು. ವಿಶ್ವಕಪ್ ಕನಸು ನುಚ್ಚುನೂರಾಗಿ ಬೇಸರದಲ್ಲಿದ್ದ ಪತಿಯನ್ನು ಅಪ್ಪಿಕೊಂಡು ಅನುಷ್ಕಾ ಶರ್ಮಾ ಸಾಂತ್ವನ ಹೇಳಿದರು.
ಸೋಲು-ಗೆಲುವಿನ ಎಲ್ಲೆಗಳನ್ನು ಮೀರಿದ ಪ್ರೀತಿಯಿಂದ ಅನುಷ್ಕಾ ಕೊಹ್ಲಿಯನ್ನು ಅಪ್ಪಿಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಮೈದಾನದಿಂದ ನಿರ್ಗಮಿಸುವಾಗ ತಮ್ಮ ಬೇಸರವನ್ನು ಹೊರಹಾಕಿದರು.
ಸೆಲೆಬ್ರೆಟಿಗಳ ಮುಖದಲ್ಲೂ ಮಾಯವಾದ ಸಂತೋಷ
ಶಾರುಖ್ ಖಾನ್, ಗೌರಿ ಖಾನ್ ಮತ್ತು ದೀಪಿಕಾ ಪಡುಕೋಣೆಯಂತಹ ಸೆಲೆಬ್ರಿಟಿಗಳು ಸೋತ ನಂತರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತೀವ್ರ ನಿರಾಶೆಗೊಂಡರು. ಆಸ್ಟ್ರೇಲಿಯಾ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ವಾತಾವರಣ ನಿಶ್ಯಬ್ಧವಾಗಿ ಕಂಡುಬಂತು.
ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತರೂ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿ ಪಡೆದರು.